ಬೆಣ್ಣಯಂತಹ ಬೆಂಡೆಕಾಯಿಯ ಉಪಯೋಗಗಳು

ಬೆಣ್ಣಯಂತಹ ಬೆಂಡೆಕಾಯಿಯ ಉಪಯೋಗಗಳು

ಬೆಂಡೆ ಕಾಯಿ ಇಡೀ ವರ್ಷ ಸಿಗುವ ತರಕಾರಿಯಾಗಿದ್ದು ವಿವಿಧ ವಿಟಮಿನ್ ಗಳು ಖನಿಜ ಮತ್ತು ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿರುವ ಕರಗದ ನಾರು ಮಲಬದ್ದತೆಯನ್ನು ನಿವಾರಿಸುತ್ತದೆ. ಬೆಂಡೆಯನ್ನು ಆದಷ್ಟು ಎಳೆಯಾಗಿರುವಾಗಲೆ ಸೇವಿಸುವುದು ಉತ್ತಮ. ಬೆಂಡೆಕಾಯಿಯಿಂದ ಆರೋಗ್ಯಕ್ಕೆ ಆಗುವ ಉಪಯೋಗಗಳನ್ನು ತಿಳಿಯೋಣ ಬನ್ನಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಬೆಂಡೆಯಲ್ಲಿಯೂ ವಿಟಮಿನ್ ಸಿ ಅಂಶವಿದೆ. ಬೆಂಡೆಯನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ:
ಬೆಂಡೆಯಲ್ಲಿಯೂ ವಿಟಮಿನ್ ಸಿ ಹಾಗು ಇತರೆ ಪೋಷಕಾಂಶಗಳು ಚರ್ಮಕ್ಕೆ ತನ್ನ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. 

ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ:
ಬೆಂಡೆಯಲ್ಲಿರುವ ಲೋಳೆಯಂತಿರುವ ದ್ರವವು (mucilage) ಜೀರ್ಣಗೊಂಡ ಆಹಾರದಿಂದ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದು.

ದೇಹದ ತೂಕ ಇಳಿಸಲು:
ಬೆಂಡೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದ ಕರಗದ ನಾರು ತೂಕ ಇಳಿಸಲು ಸಹಕಾರಿಯಾಗಿದೆ. 

ಮಧುಮೇಹವನ್ನು ಹತೋಟಿಯಲ್ಲಿರಿಸುತ್ತದೆ:
ಬೆಂಡೆಯಲ್ಲಿರುವ ಯೂಜಿನಾಲ್ (Eugenol) ಎಂಬ ಪೋಷಕಾಂಶವು ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಿ ಸಕ್ಕರೆಯ ಸದ್ಬಳಕೆಗೆ ಸಹಕರಿಸುತ್ತದೆ.

ಬೆನ್ನು/ಸೊಂಟ ನೋವಿಗೆ ಪರಿಣಾಮಕಾರಿ:
ಬೆಂಡೆಯಲ್ಲಿರುವ ನಾರಿನಂಶವು ಬೆನ್ನು/ಸೊಂಟ ನೋವನ್ನು ಕಡಿಮೆಮಾಡುತ್ತದೆ. ನಾರಿನಂಶವು ಮೂಳೆಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ನಿಯಮಿತವಾಗಿ ಇದನ್ನು ಬಳಸುತ್ತಾ ಬಂದರೆ ಪರಿಣಾಮಕಾರಿ ಹೆಚ್ಚು.

ಸಲಹೆ:

  • ಬೆಂಡೆಕಾಯಿಯನ್ನು ಸಾರು ಅಥವಾ ಪಲ್ಯ ಮಾಡುವ ಮೊದಲು ಕೊಂಚ ಎಣ್ಣೆಯಲ್ಲಿ ಹುರಿದುಕೊಂಡರೆ ಅದರ ಲೋಳೆ ಹೊರಬರದೆ ಅಡುಗೆ ಹೆಚ್ಚು ರುಚಿಕರವಾಗಿರುತ್ತದೆ. 
  • ಬೆಂಡೆಯನ್ನು ಎಳೆದಿದ್ದಾಗಲೇ ಉಪಯೋಗಿಸುವುದು ಉತ್ತಮ.