ಪಾಕ್ ಮತ್ತು ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ
ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ.
ಇದು 6.1 ತೀವ್ರತೆಯ ಪ್ರಭಲ ಭೂಕಂಪನವಾಗಿದ್ದು ಘಟನೆಯಲ್ಲಿ 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಗಡಿಯ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಭೂಕಂಪ ಕೇಂದ್ರವಾಗಿದ್ದು, ಅತೀ ಹೆಚ್ಚು ಹಾನಿಯಾಗಿದ್ದು ಮಿರ್ಪುರ್ ಮತ್ತು ಝೆಲುಮ್ ನಲ್ಲಿ ಎಂಬ ಮಾಹಿತಿ ಲಭ್ಯವಾಗಿದೆ. ನೆನ್ನೆ ಸೆ 24 ರ ಮಧ್ಯಾಹ್ನ 4.30 ಕ್ಕೆ ಭೂಕಂಪ ಸಂಭವಿಸಿದ್ದು ಹೆದ್ದಾರಿಗಳಿಗೂ ಸಾಕಷ್ಟು ಹಾನಿಗಳಾಗಿವಿ ಎಂದು ತಿಳಿದುಬಂದಿದೆ. ಭೂಕಂಪನ 10 ಕಿಮೀ ಆಳದಲ್ಲಿ ಸಂಭವಿಸಿದ್ದು ಭಾರತದಲ್ಲಿ ಪಂಜಾಬ್, ದೆಹಲಿ, ಹರ್ಯಾಣ, ಹಿಮಾಚಲಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ.