ಗರಿಕೆ ಹುಲ್ಲಿನ ಆರೋಗ್ಯಕರ ಉಪಯೋಗಗಳು
ಗರಿಕೆ ಹುಲ್ಲಿನ ಆರೋಗ್ಯಕರ ಗುಣಗಳು ಎಷ್ಟು ಜನರಿಗೆ ಗೊತ್ತು?
ಸಾಮಾನ್ಯವಾಗಿ ಗರಿಕೆ ಹುಲ್ಲು ಅಂದರೆ ನೆನಪಾಗುವುದು ನಮ್ಮ ವಿಗ್ನ ವಿನಾಯಕ. ಗಣೇಶನಿಗೆ ಅತ್ಯಂತ ಪ್ರಿಯವಾದ ಒಂದು ವಸ್ತು ಅಂದರೆ ಅದು ಗರಕೆ ಹುಲ್ಲು. ಆದರೆ ನಿಮಗೆ ಗೊತ್ತಾ ಗರಿಕೆ ಹುಲ್ಲಿನಲ್ಲಿ ಅದ್ಭುತವಾದ ಆರೋಗ್ಯಕರವಾದ ಗುಣಗಳು ಇವೇ ಅಂತ. ಹಾಗಾದರೆ ಬನ್ನಿ ನೋಡೋಣ ನಾವು ಪ್ರತಿನಿತ್ಯ ಗರಿಕೆ ಸೇವನೆ ಮಾಡುವುದರಿನಿಂದ ಆಗುವ ಉಪಯೋಗಗಳೇನು ಅಂತ:
- ನಿಮಗೆ ತಲೆಹೊಟ್ಟು ವಿಪರೀತವಾಗಿದ್ದರೆ ಎಳ್ಳೆಣ್ಣೆಗೆ ಗರಿಕೆ ರಸಹಾಕಿ ಕುದಿಸಿ ಈ ಎಣ್ಣೆಯನ್ನು ತಲೆಗೆ ಹಚ್ಚುತ್ತಾ ಬನ್ನಿ. ನಿಮ್ಮ ತಲೆ ಹೊಟ್ಟು ನಿವಾರಣೆಯಾಗುತ್ತದೆ.
- ನಿಮ್ಮ ವಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಗರಿಕೆ ರಸದಿಂದ ಬಾಯಿ ಮುಕ್ಕಳಿಸುತ್ತ ಬನ್ನಿ ಇದರಿಂದ ರಕ್ತಸ್ರಾವ ಕಡಿಮೆ ಆಗುತ್ತದೆ ಹಾಗು ಬಾಯಿ ದುರ್ಗಂಧ ನಿವಾರಣೆಯಾಗುತ್ತದೆ.
- ನಿಮಗೆ ಯಾವುದೇ ಕಾರಣಕ್ಕೂ ತಲೆನೋವು ಕಾಣಿಸಿ ಕೊಂಡಿದ್ದರೆ ಗರಿಕೆ ಪುಡಿಯನ್ನು ನೀರಿನಲ್ಲಿ ಕಲಸಿ ಬೆಲ್ಲದ ಜೊತೆ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ.
- ನಿಮ್ಮ ಚರ್ಮದ ಯಾವುದೇ ಭಾಗದಲ್ಲಿ ತುರಿಕೆ ಉರಿ ಕಂಡು ಬಂದರೆ ಗರಿಕೆ ರಸಕ್ಕೆ ಅರಶಿನ ಬೆರೆಸಿ ಹಚ್ಚುವುದರಿಂದ ನೋವು ಶಮನವಾಗುತ್ತದೆ.
- ನಿಮಗೆ ಎದೆ ಉರಿ, ಅಸಿಡಿಟಿ, ಹೊಟ್ಟೆ ಉರಿ ಕಂಡು ಬಂದರೆ ಗರಿಕೆ ರಸವನ್ನು ಮಜ್ಜಿಗೆ ಜೊತೆ ಕುಡಿಯುವುದರಿಂದ ನೋವು ಗುಣಮುಖವಾಗುತ್ತದೆ.
ನಿಮಗೆ ಈ ಗರಿಕೆ ಹುಲ್ಲಿನ ಆರೋಗ್ಯಕರ ಉಪಯೋಗಗಳು ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ .ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.