ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಮನೆಮದ್ದು
ಗರ್ಭಾವಸ್ಥೆಯು ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ ಈ ಬದಲಾವಣೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದು ಸ್ಟ್ರೆಚ್ ಮಾರ್ಕ್ಸ್. ಸ್ಟ್ರೆಚ್ ಗುರುತುಗಳು ಚರ್ಮದ ಮೇಲ್ಮೈಯಲ್ಲಿ ಗುಲಾಬಿ, ನೇರಳೆ ಅಥವಾ ಕೆಂಪು ಬಣ್ಣದಿಂದ ಕೂಡಿದ ಕಿರಿದಾದ ಗೆರೆಗಳಾಗಿರುತ್ತವೆ. ಗರ್ಭಧಾರಣೆಯ ಸಮಯದಲ್ಲಿ ಬೆಳೆಯುತ್ತಿರುವ ಮಗುವಿನ ಕಾರಣದಿಂದಾಗಿ ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಸ್ನಾಯುಗಳು ಮತ್ತು ಚರ್ಮವನ್ನು ವಿಸ್ತರಿಸುವುದರಿಂದ ಸ್ಟ್ರೆಚ್ ಮಾರ್ಕ್ಸ್ ಉಂಟಾಗುತ್ತದೆ. ತೊಡೆಗಳು, ಪೃಷ್ಠಗಳು, ಮೇಲಿನ ತೋಳುಗಳು, ಸ್ತನ ಮತ್ತು ಕೆಳಗಿನ ಬೆನ್ನಿನ ಮೇಲೆ ಸ್ಟ್ರೆಚ್ ಗುರುತುಗಳು ರೂಪುಗೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಗುರುತುಗಳು ಕ್ರಮೇಣ ಕಡಿಮೆಯಾಗಬಹುದು. ಗರ್ಭಧಾರಣೆಯ ಈ ಗುರುತುಗಳನ್ನು ಕಡಿಮೆ ಮಾಡಲು ನೀವು ಮನೆಮದ್ದುಗಳನ್ನು ಹುಡುಕುತ್ತಿದ್ದರೆ ಈ ಲೇಖನ ನಿಮಗೆ ಸಹಾಯಕವಾಗಿರುತ್ತದೆ.
ಈಗ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಹೇಳಿಕೊಳ್ಳುವ ಮಾಯಿಶ್ಚರೈಸರ್, ಕ್ರೀಮ್, ಜೆಲ್ ಮತ್ತು ಲೋಷನ್ಗಳಂತಹ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸ್ಟ್ರೆಚ್ ಲೈನ್‌ಗಳನ್ನು ಕಡಿಮೆ ಮಾಡಲು ಲೇಸರ್ ಚಿಕಿತ್ಸೆಗಳಾದ ಪಲ್ಸ್ ಡೈ ಲೇಸರ್ ಥೆರಪಿ ಮತ್ತು ಕಾಸ್ಮೆಟಿಕ್ ಸರ್ಜರಿಗಳನ್ನು ನಿಮ್ಮ ವೈದ್ಯರು ಸೂಚಿಸಬಹುದು. ಆದರೆ ಚಿಕಿತ್ಸೆಯ ಈ ವಿಧಾನಗಳು ಸಾಮಾನ್ಯವಾಗಿ ತುಂಬಾ ದುಬಾರಿಯಾಗಿದ್ದು ಸಾಕಷ್ಟು ಅಡ್ಡ ಪರಿಣಾಮಗಳನ್ನು ತಂದೊಡ್ಡಬಹುದು. ಸ್ಟ್ರೆಚ್ ಮಾರ್ಕ್ಸ್ ಅನ್ನು ಸ್ವಾಭಾವಿಕವಾಗಿ ಸರಳ ಮತ್ತು ಕಡಿಮೆ ವೆಚ್ಚದಲ್ಲಿ ಕಡಿಮೆ ಮಾಡಲು ಮನೆಮದ್ದುಗಳನ್ನು ಕೆಳಗೆ ಚರ್ಚಿಸಲಾಗಿದೆ:
ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡಲು ಕ್ಯಾಸ್ಟರ್ ಆಯಿಲ್- ಕ್ಯಾಸ್ಟರ್ ಆಯಿಲ್ ನಿಂದ ಸ್ಟ್ರೆಚ್ ಮಾರ್ಕ್ ಇರುವ ಜಾಗದಲ್ಲಿ 15 ರಿಂದ 20 ನಿಮಿಷಗಳ ವೃತ್ತಾಕಾರದ ಚಲನೆಯಲ್ಲಿ ಪ್ರತಿದಿನ ಮಸಾಜ್ ಮಾಡಿ ಮತ್ತು ನಂತರ ಹತ್ತಿ ಬಟ್ಟೆಯಿಂದ ಜಾಗವನ್ನು ಸುತ್ತಿ,ಇದರಿಂದ ಆ ಜಾಗದಲ್ಲಿ ಸ್ವಲ್ಪ ಶಾಖದ ಅನುಭವ ಹೊಂದುವಿರಿ. ಈ ವಿಧಾನ ಪ್ರತಿದಿನ ಅರ್ಧ ಘಂಟೆ ಮಾಡಿ, ಸ್ಟ್ರೆಚ್ ಮಾರ್ಕ್ಸ್ ಕ್ರಮೇಣ ಕಡಿಮೆಯಾಗುವುದನ್ನು ನೀವು ಕಾಣಬಹುದು.
ವಿಕ್ಸ್ ವೆಪಾರ್ ರಬ್: ವಿಕ್ಸ್ ವೆಪಾರ್ ರಬ್ ಅನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ ತಿಕ್ಕಬೇಕು ನಂತರ ಜಾಗವನ್ನು ಹತ್ತಿ ಬಟ್ಟೆ ಇಂದ ಸುತ್ತಿ ರಾತ್ರಿಯಿಡಿ ಬಿಡಿ. ಸ್ಟ್ರೆಚ್ ಮಾರ್ಕ್ ಕಡಿಮೆಯಾಗುವುದು ಖಚಿತ.
ಅಲೋ ವೆರಾ ಜೆಲ್: ಇದು ಸಾಮಾನ್ಯವಾಗಿ ಲಭ್ಯವಿರುವ ಮತ್ತು ಸ್ಟ್ರೆಚ್ ಮಾರ್ಕ್ಸ್ ಅನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸುಲಭವಾದ ವಿಧಾನವಾಗಿದೆ. ಅಲೋ ವೆರಾ ಸಸ್ಯದಿಂದ ಅಲೋ ವೆರಾ ರಸವನ್ನು ಹೊರತೆಗೆಯಿರಿ ಮತ್ತು ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಲೇಪಿಸಿ. ನೆನಪಿಡಿ ಈ ಚಿಕಿತ್ಸೆ ಆರಂಭಿಕ ಹಂತಗಳಲ್ಲಿ ಪರಿಣಾಮಕಾರಿ.
ಆಲೂಗಡ್ಡೆ: ಆಲೂಗಡ್ಡೆಯನ್ನು ಚೂರುಗಳಾಗಿ ಕತ್ತರಿಸಿ ಚೂರುಗಳನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗದಲ್ಲಿ ಉಜ್ಜಬೇಕು. ನಂತರ ತಣ್ಣೀರಿನಿಂದ ತೊಳೆಯಬೇಕು. ಈ ವಿಧಾನವನ್ನು ಪ್ರತಿದಿನ ಅರ್ಧ ಘಂಟೆ ಮಾಡಿ ಹಾಗು ಸ್ಟ್ರೆಚ್ ಮಾರ್ಕ್ಸ್ ನೈಸರ್ಗಿಕವಾಗಿ ಮರೆಯಾಗುವುದನ್ನು ನೋಡಿ.
ಮೊಟ್ಟೆಯ ಬಿಳಿ ಭಾಗ: ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಮೊಟ್ಟೆಯ ಬಿಳಿ ಬಣ್ಣವನ್ನು ದಿನಕ್ಕೆ ೩ ಭಾರಿ ಲೇಪಿಸಿ ಮತ್ತು ಸ್ಟ್ರೆಚ್ ಮಾರ್ಕ್ಸ್ ಕ್ರಮೇಣ ಕಡಿಮೆಯಾಗುವುದನ್ನು ನೀವು ಕಾಣಬಹುದು.
ತೆಂಗಿನ ಎಣ್ಣೆ: ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ತೆಂಗಿನ ಎಣ್ಣೆಯಿಂದ ದಿನಕ್ಕೆ 3 ಬಾರಿ ಮಸಾಜ್ ಮಾಡಿ ಮತ್ತು ಕೆಲವು ದಿನಗಳಲ್ಲಿ ಬದಲಾವಣೆಯನ್ನು ನೀವು ಗಮನಿಸಬಹುದು.
ನಿಂಬೆ ರಸ: ನಿಂಬೆ ಉತ್ತಮ ಬ್ಲೀಚಿಂಗ್ ಏಜೆಂಟ್. ನಿಂಬೆಯ ಆಮ್ಲೀಯ ಸ್ವರೂಪವು ಚರ್ಮವನ್ನು ಹಗುರಗೊಳಿಸುತ್ತದೆ. ಸ್ಟ್ರೆಚ್ ಮಾರ್ಕ್‌ಗಳಿಗೆ ನೇರವಾಗಿ ನಿಂಬೆ ರಸವನ್ನು ಅನ್ವಯಿಸಿ ಮತ್ತು ಸ್ಟ್ರೆಚ್ ಮಾರ್ಕ್ಸ್ ಕ್ರಮೇಣ ಕಡಿಮೆಯಾಗುವುದನ್ನು ನೀವು ಕಾಣಬಹುದು.
ನಿಮಗೆ ಈ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಮನೆಮದ್ದು ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ