ಅಮಿತಾಭ್ ಬಚ್ಚನ್ ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜವಡೇಕರ್ ಅವರು ಟ್ವಿಟ್ಟರ್ ಮೂಲಕ ಈ ವಿಷಯ ಬಹಿರಂಗಗೊಳಿಸಿದ್ದು, ಅಮಿತಾಭ್ ಬಚ್ಚನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರಿಗೆ ಈಗಾಗಲೇ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದೆ. ಇವುಗಳೊಂದಿಗೆ ದಾದಾ ಸಾಹೇಬ್ ಪಾಲ್ಕೆ ಕೂಡ ಅವರ ಮುಡಿಗೇರಿದೆ.
ನಾಲ್ಕು ದಶಕಗಳ ಕಾಲ ಭಾರತೀಯ ಚಿತ್ರರಂಗಕ್ಕೆ ಅಮಿತಾಭ್ ಬಚ್ಚನ್ ನೀಡಿರುವ ಕೊಡುಗೆ ಅಪಾರ ಅದನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ.
ಅಮಿತಾಭ್ ಬಚ್ಚನ್ ಅವರ ಮೊದಲ ಸಿನೆಮಾ 1961ರಲ್ಲಿ ತೆರೆಕಂಡ 'ಸಾಥ್ ಹಿಂದೂಸ್ತಾನಿ'. ಇಲ್ಲಿಂದ ಆರಂಭವಾದ ಅವರ ಸಿನಿ ಪಯಣ ನಾಲ್ಕು ದಶಕಗಳ ಕಾಲ ಮುಂದುವರಿದಿದೆ.
ಅಮಿತಾಭ್ ಬಚ್ಚನ್ ಇದುವೆರಗೂ ನಾಲ್ಕು ರಾಷ್ಟ್ರ ಪ್ರಶಸ್ತಿ ಲಭಿಸಿದೆ (ಅಗ್ನಿಪತ್, ಪೀಕು, ಪಾ, ಬ್ಲಾಕ್ ಚಿತ್ರಗಳಿಗೆ).