ಕ್ಯಾರಟ್ ನ ಆರೋಗ್ಯಯುತ ಲಾಭಗಳು

ಕ್ಯಾರಟ್ ನ ಆರೋಗ್ಯಯುತ ಲಾಭಗಳು

ಕ್ಯಾರಟ್ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಅದರಲ್ಲೂ ಇದರಿಂದ ನಮಗೆ ಎಷ್ಟೆಲ್ಲ ಆರೋಗ್ಯಕ್ಕೆ ಲಾಭವಿದೆ ಅಂತ ತಿಳಿದಮೇಲೆ ತಿನ್ನದೇ ಇರ್ತಾರ. ಕ್ಯಾರಟ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಂಶ,  ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್ ಮತ್ತು ಸತು ಇದೆ.ಕ್ಯಾರಟ್‍ನಲ್ಲಿ ಅತ್ಯದ್ಭುತವಾದ ಆಂಟಿ ಆಕ್ಸಿಡೆಂಟ್ ಸಹ ಇರುತ್ತದೆ.

ವಿಟಮಿನ್ ಎ ಜೊತೆಗೆ ಇದರಲ್ಲಿ ಬೀಟಾ ಕೆರೊಟಿನ್ ಸಹ ಇರುತ್ತದೆ. ಅವುಗಳಿಂದಲೆ ಕ್ಯಾರೆಟ್‍ಗೆ ಕಡು ಕಿತ್ತಳೆ ಬಣ್ಣ ಬಂದಿರುವುದು. ಕ್ಯಾರಟ್ ಅನ್ನು ಪ್ರತಿದಿನ ತಿನ್ನುವುದರಿಂದ ಆಗುವ ಲಾಭವೇನು ಅಂತ ನೋಡೋಣ ಬನ್ನಿ.

ಹಲ್ಲುಗಳು ಗಟ್ಟಿಯಾಗುತ್ತವೆ:
ಕ್ಯಾರಟ್ ಅನ್ನು ಹಾಗೆ ತಿನ್ನುವುದರಿಂದ ಹಲ್ಲಿನ ಹೊಳಪು ಬಿಳಿಯಾಗುತ್ತದೆ ಹಾಗು ವಸಡುಗಳು ಸದೃಢವಾಗುತ್ತದೆ.

ಕಾಂತಿಯುತ ತ್ವಚೆಗೆ:
ಕ್ಯಾರಟ್ ರಸವು ನಮ್ಮ ಚರ್ಮಕ್ಕೆ ಒಂದು ಒಳ್ಳೆಯ ಔಷಧಿಯಾಗಿದೆ. ಇದು ಚರ್ಮವನ್ನು ಕಾಂತಿಯುತವಾಗಿಸುತ್ತದೆ.

ಕಣ್ಣುಗಳು:
ಕ್ಯಾರಟ್ ನಲ್ಲಿರುವ ವಿಟಮಿನ್ ಏ ನಮ್ಮ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಸಹಕಾರಿ. ಇದರಿಂದ ದೃಷ್ಟಿ ದೋಷವು ನಿವಾರಣೆಯಾಗುತ್ತದೆ.

ರಕ್ತ ಶುದ್ದಿಗೆ:
ಕ್ಯಾರಟ್ ನಲ್ಲಿರುವ ಆಲ್ಕ ಲೈನೆಗಳು ರಕ್ತವನ್ನು ಶುದ್ದೀಕರಿಸುವಲ್ಲಿ ಸಹಕಾರಿಯಾಗಿದೆ.

ಸುಕ್ಕು ಚರ್ಮ ತಡೆಗಟ್ಟುವುದು:
ಇದರಲ್ಲಿರುವ ಆಂಟಿ ಆಕ್ಸಿಡಾಂಟ್ ಗಳು ನಮ್ಮ ಚರ್ಮವನ್ನು ಬಿಗಿಯಾಗಿಸಿ ಸುಕ್ಕು ಚರ್ಮವನ್ನು ತಡೆಗಟ್ಟುವುದು, ಹಾಗು ವಯಸ್ಸಾಗದಂತೆ ಕಾಣುವುದನ್ನು ತಡೆಯುತ್ತದೆ.

ಸನ್ ಬರ್ನ್ ನಿಂದ ಮುಕ್ತಿ:
ಸೂರ್ಯನಿಂದ ಹೊರಹೊಮ್ಮುವ ಸೂಕ್ಷ್ಮ ಕಿರಣಗಳು ನಮ್ಮ ಚರ್ಮಕ್ಕೆ ಹಾನಿಯನ್ನು ಉಂಟುಮಾಡಬಹುದು. ಹಾನಿಗೊಳಗಾದ ಚರ್ಮವನ್ನು ಗುಣಪಡಿಸುತ್ತದೆ ಹಾಗು ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡುತ್ತದೆ.

ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ:
ಕ್ಯಾರಟ್ ನಲ್ಲಿರುವ ಬೀಟಾ ಕೆರೋಟಿನ್ ಅಂಶವು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೆಚ್ಚುವಂತೆ ಮಾಡುತ್ತದೆ.

ಹೃದಯಕ್ಕೆ ಒಳ್ಳೆಯದು:
ಇದು ಕೊಲೆಸ್ಟ್ರಾಲ್ ವಿರುದ್ಧ ಹೋರಾಡಿ ಹೃದಯನ್ನು ರಕ್ಷಿಸುತ್ತದೆ.

ಲಿವರ್ ನ ಆರೋಗ್ಯಕ್ಕೂ ಒಳ್ಳೆಯದು:
ಇದು ಶುದ್ದೀಕರಣದ ಗುಣ ಹೊಂದಿದ್ದು ಲಿವರ್ ನಲ್ಲಿರುವ ಕಲ್ಮಶವನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ.

ಇದನ್ನೂ ಓದಿ: ಕೂದಲು ಸಮೃದ್ಧವಾಗಿ ಬೆಳೆಯಲು ಹೀಗೆ ಮಾಡಿ

ಇದನ್ನೂ ಓದಿ: ಪ್ರತಿನಿತ್ಯ ಓಟ್ಸ್ ಸೇವನೆ ಇಂದ ಏನೆಲ್ಲಾ ಲಾಭವಿದೆ ನೋಡಿ