ಬಿಳಿ ಕೂದಲಿಗೆ ಮನೆಮದ್ದು

ಬಿಳಿ ಕೂದಲಿಗೆ ಮನೆಮದ್ದು

ನಿಮ್ಮ ಕೂದಲು ಚಿಕ್ಕ ವಯಸ್ಸಿನಲ್ಲೇ ಬಿಳಿ ಆಗಿದೆ ನಾ?ನೀವು ಬಿಳಿ ಕೂದಲಿನ ಸಮಸ್ಯೆ ಇಂದ ಬಾಳುತ್ತಿದ್ದೀರಾ? ನಿಮ್ಮ ಕೂದಲು ಕೆಮಿಕಲ್ ಉಪಯೋಗಿಸದೆ ಕಪ್ಪಾಗಬೇಕಾ? ಹಾಗಾದರೆ ಇಲ್ಲಿದೆ ನ್ಯಾಚುರಲ್ ಹೇರ್ ಡೈ. ಸಾಮಾನ್ಯವಾಗಿ ಇವತ್ತಿನ ಜನರೇಶನ್ ನಲ್ಲಿ ಬೇಗನೆ ತುಂಬಾ ಜನರ ಕೂದಲು ಬೆಳ್ಳಗಾಗುತ್ತಿವೆ ಇದರಿಂದ ಸಾಕಷ್ಟು ಜನ ಕೆಮಿಕಲ್ ಹೇರ್ ಡೈ ಗೆ ಮೊರೆಹೋಗುತ್ತಿದ್ದಾರೆ. ಆದರೆ ನಾವಿಲ್ಲಿ ಹೇಳಿಕೊಡುವ ನ್ಯಾಚುರಲ್ ಹೇರ್ ಡೈ ಒಮ್ಮೆ ಮಾಡಿ ನೋಡಿ ಯಾವುದೇ ಸೈಡ್ ಎಫೆಕ್ಟ್ ಇರೋಲ್ಲ. ಹಾಗಾದರೆ ಬನ್ನಿ ನ್ಯಾಚುರಲ್ ಹೇರ್ ಪ್ಯಾಕ್ ಹೇಗೆ ಮಾಡೋದು ಅಂತ ನೋಡೋಣ:

ಬೇಕಾಗುವ ಸಾಮಗ್ರಿ:

  • 2 ಚಮಚ ಬೆಟ್ಟದ ನೆಲ್ಲಿಕಾಯಿ ಪೌಡರ್
  • 2 ಚಮಚ ಮೆಹಂದಿ ಪೌಡರ್
  • ಟೀ ಡಿಕಾಷನ್ ಹಾಗು ವಿಟಮಿನ್ E ಕ್ಯಾಪ್ಸುಲ್. 

ಮಾಡುವ ವಿಧಾನ :

  1. ಮೊದಲಿಗೆ ಬೆಟ್ಟದ ನೆಲ್ಲಿಕಾಯಿ ಪೌಡರ್ ಹಾಗು ಮೆಹಂದಿ ಪೌಡರ್ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  2. ಇದಕ್ಕೆ ಸೊಸಿಟ್ಟಿರುವ ಡಿಕಾಷನ್ ಮತ್ತೆ ಹಾಕಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ನಂತರ 2 ವಿಟಮಿನ್ E ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಕಲ್ಸಿ.
  3. ಈ ಪೇಸ್ಟ್ ಅನ್ನು ನೀವು ತಲೆಸ್ನಾನ ಮಾಡುವ 1 ಗಂಟೆ ಮುಂಚೆ ತಲೆಗೆ ಹಚ್ಚಿಕೊಳ್ಳಿ. ನಂತರ ಕೆಮಿಕಲ್ ರಹಿತ ಶಂಪೋವಿನಿಂದ ತಲೆ ಸ್ನಾನ ಮಾಡಿಕೊಳ್ಳಿ.
  4. ಈ ರೀತಿ ನೀವು ವಾರಕ್ಕೆ ಒಮ್ಮೆ ಅಥವಾ 2 ಬಾರಿ ಮಾಡುವುದರಿಂದ ನಿಮ್ಮ ಕೂದಲು ಕಪ್ಪಾಗಿರುವುದಲ್ಲದೆ, ಕೂದಲು ಉದುರುವುದು ಕಮ್ಮಿ ಆಗುತ್ತದೆ ಹಾಗೆ ಕೂದಲು ದಟ್ಟವಾಗಿ ಬೆಳೆಯುತ್ತವೆ.