ಗೂಗಲ್ ನಲ್ಲಿ ಸನ್ನಿಯನ್ನು ಮೀರಿಸಿದ ಪ್ರಿಯಾಂಕಾ

ಗೂಗಲ್ ನಲ್ಲಿ ಸನ್ನಿಯನ್ನು ಮೀರಿಸಿದ ಪ್ರಿಯಾಂಕಾ

ಗೂಗಲ್‍ನಲ್ಲಿ ಯಾರು ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಎಂಬ ಪಟ್ಟಿಯನ್ನು ಭಾರತದಲ್ಲಿ ಗ್ಲೋಬಲ್ ಡಾಟಾ ವಿಶ್ಲೇಷಣಾ ಸಂಸ್ಥೆ ಬಿಡುಗಡೆ ಮಾಡಿದೆ. ಇದರ ಪ್ರಕಾರ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ಪ್ರಿಯಾಂಕ ಚೋಪ್ರಾ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ ಸನ್ನಿ ಲಿಯೋನ್ ಇದ್ದಾರೆ. 

  1. ಪ್ರಿಯಾಂಕ ಚೋಪ್ರಾ ಅವರನ್ನು ಈ ವರ್ಷ ಸುಮಾರು 39 ಲಕ್ಷ ಬಾರಿ ಗೂಗಲ್‍ನಲ್ಲಿ ಸರ್ಚ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
  2. ಸನ್ನಿಯನ್ನು ಸುಮಾರು 31 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ.
  3. ಈ ಇಬ್ಬರನ್ನು ಬಿಟ್ಟರೆ ಸಲ್ಮಾನ್ ಖಾನ್ ಅವರು ಮೂರನೇ ಸ್ಥಾನದಲ್ಲಿ ಇದ್ದು, ಇವರನ್ನು 21 ಲಕ್ಷ ಬಾರಿ ಗೂಗಲ್‍ನಲ್ಲಿ ಸರ್ಚ್ ಮಾಡಲಾಗಿದೆ.
  4. ನಂತರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರನ್ನು 20 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ.