ಕರ್ನಾಟಕದಲ್ಲಿ ಕೊರೋನಾ ಜೊತೆ ಕರೆಂಟ್ ಬಿಲ್ ಶಾಕ್

ಕರ್ನಾಟಕದಲ್ಲಿ ಕೊರೋನಾ ಜೊತೆ ಕರೆಂಟ್ ಬಿಲ್ ಶಾಕ್

ಕರ್ನಾಟಕದಲ್ಲಿ ಕೊರೋನಾ ಹಾವಳಿ ಒಂದು ಕಡೆ ಆದರೆ , ಕರೆಂಟ್ ಬಿಲ್ ಹಾವಳಿ ಇನ್ನೊಂದು ಕಡೆ ಜನಸಾಮಾನ್ಯರ ತಲೆ ಬಿಸಿ ಮಾಡಿದೆ. ಲಾಕ್ ಡೌನ್ ಸಮಯದಲ್ಲಿ ಹಲವಾರು ಮಂದಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದು ಕರೆಂಟ್ ಬಳಸದೆ ಇದ್ದರೂ ಸಿಕ್ಕಾಪಟ್ಟೆ ಬಿಲ್ ನೀಡಲಾಗಿದೆ. ಅವೈಜ್ಞಾನಿಕವಾಗಿ ಬಿಲ್ ಜನರೇಟ್ ಮಾಡುತ್ತಿರುವುದಕ್ಕೆ ಜನ ತಿರುಗಿ ಬಿದ್ದಿದ್ದಾರೆ. ಶಿಕ್ಷಣ ಸಂಸ್ಥೆಗಳು, ಕೈಗಾರಿಗೆ ಸಂಸ್ಥೆಗಳು ಹಲವು ದಿನಗಳಿಂದ ಬಂದ್ ಆಗಿದ್ದು ವಿದ್ಯುತ್ ಬಳಸದಿದ್ದರೂ ಅವರಿಗೂ ಅತಿಹೆಚ್ಚಿನ ಬಿಲ್ ನೀಡಲಾಗಿದೆ. ಸದ್ಯ ಇಂಧನ ಇಲಾಖೆ ಸಿಎಂ ಯಡಿಯೂರಪ್ಪರವರ ಬಳಿಯೇ ಇರುವುದರಿಂದ ಅವರ ಗಮನಕ್ಕೆ ತರಲಾಗಿದ್ದು ಶೀಘ್ರವೇ ಲೋಪವನ್ನು ಬಗೆಹರಿಸುವ ವಿಶ್ವಾಸವಿದೆ.