ರೈಲಿನಲ್ಲಿ ಸಂಚರಿಸಲು ಕಂಡಿಷನ್ಸ್ ಇವೆ
ನಾಳೆ(ಮಂಗಳವಾರ)ದಿಂದ ದೆಹಲಿ ಸೇರಿದಂತೆ ಕೆಲವು ನಗರಗಳಲ್ಲಿ ೧೫ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲಿವೆ. ಇದಕ್ಕೆ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸ್ಪಷ್ಟನೆ ನೀಡಿದ್ದಾರೆ. ರೈಲಿನಲ್ಲಿ ಸಂಚರಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗ ಸೂಚಿಗಳನ್ನು ಅನುಸರಿಸಬೇಕು. ಅವು ಯಾವುವೆಂದರೆ
- ಧೃಡಪಡಿಸಿರುವ ಇ-ಟಿಕೆಟ್ ಹೊಂದಿರ ಬೇಕು
- ಪ್ಲಾಟ್ ಫಾರ್ಮ್ ನಲ್ಲಿರುವ ಅರೋಗ್ಯ ತಪಾಸಣೆ ಹಾಗು ಸ್ಕ್ರೀನಿಂಗ್ ನಲ್ಲಿ ಹಾದುಹೋಗಬೇಕು
- ಕೊರೋನಾ ಸೋಂಕಿನ ಲಕ್ಷಣಗಳು ಇರಬಾರದು
- ಮಾಸ್ಕ್ ಧರಿಸುವುದು ಕಡ್ಡಾಯ, ಸ್ಯಾನಿಟೈಜರ್ ಬಳಸಬೇಕಾಗುತ್ತದೆ.
- ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
- ರೈಲಿನ ಸಮಯಕ್ಕಿಂತ 2 ಗಂಟೆಗಳ ಮೊದಲು ಪ್ರಯಾಣಿಕರು ನಿಲ್ದಾಣವನ್ನು ತಲುಪಬೇಕು.