ಬಾಳೆಹಣ್ಣಿನ ದಿಂಡಿನ ಉಪಯೋಗಗಳೇನು ಅಂತ ಒಮ್ಮೆ ನೋಡಿ
ಬಾಳೆಹಣ್ಣಿನ ಪ್ರತಿಯೊಂದು ಭಾಗದಲ್ಲೂ ನ್ಯೂಟ್ರಿಷನ್ ಹಾಗು ನಮ್ಮ ದೇಹಕ್ಕೆ ಶಕ್ತಿ ಒದಗಿಸುವ ಸಾಮರ್ಥ್ಯ ಇದೆ. ಹಾಗಾದರೆ ಬನ್ನಿ ಬಾಳೆಹಣ್ಣಿನ ದಿಂಡಿನ ಉಪಯೋಗಗಳೇನು ಅಂತ ತೊಳಿಯೋಣ:
1. ಪಚನಕ್ರಿಯೆ: ನಾವು ಬಾಳೆಹಣ್ಣಿನ ದಿಂಡಿನ ಜ್ಯೂಸು ಮಾಡಿಕುಡಿಯುವುದರಿಂದ ಇದರಲ್ಲಿನ ನಾರಿನ ಅಂಶ ನಮ್ಮ ದೇಹದಲ್ಲಿನ ಟಾಕ್ಸಿನ್ಸ್ ಗಳನ್ನೂ ಹೊರಹಾಕಲು ಸಹಾಯಮಾಡುತ್ತದೆ ಹಾಗು ಇದು ನಮ್ಮ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.
2. ಕಿಡ್ನಿ ಕಲ್ಲುಗಳಿಗೆ ರಾಮಬಾಣ: ನಿಮಗೆ ಕಿಡ್ನಿ ಕಲ್ಲುಗಳಾಗಿದ್ದರೆ 1 ಗ್ಲಾಸ್ ಬಾಳೆಹಣ್ಣಿನ ದಿಂಡಿನ ಜ್ಯೂಸು ಜೊತೆ ಇಲಾಚಿ ಹಾಕಿ ಕುಡಿಯುವುದರಿಂದ ನಿಮಗೆ ಕಲ್ಲುಗಳಿಂದಾಗುವ ನೋವನ್ನು ಗುಣಮುಖವಾಗುತ್ತದೆ ಹಾಗು ಬಾಳೆಹಣ್ಣಿನ ದಿಂಡಿನ ಜ್ಯೂಸು ಜೊತೆ 2 ಹನಿ ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ನಿಮಗೆ ಕಿಡ್ನಿ ಸ್ಟೋನ್ ಆಗುವುದನ್ನು ತಡೆಗಟ್ಟಬಹುದು.
3. ತೂಕ ಇಳಿಸಲು ಸಹಕಾರಿ: ನೀವು ಬಾಳೆಹಣ್ಣಿನ ದಿಂಡಿನ ಜ್ಯೂಸು ಕುಡಿಯುವುದರಿಂದ ಇದರಲ್ಲಿನ ನಾರಿನ ಅಂಶ ನಮ್ಮ ದೇಹದ ಕೆಟ್ಟ ಟಾಕ್ಸಿನ್ಸ್ ಎಲ್ಲ ಹೊರಗೆ ಹಾಕುವುದರಿಂದ ನಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
4. ರಕ್ತದ ಒತ್ತಡ ನಿಯಂತ್ರಣ: ಬಾಳೆ ಹಣ್ಣಿನ ದಿಂಡಿನಲ್ಲಿ ವಿಟಮಿನ್ ಬಿ೬ , ಐರನ್ ಹೆಚ್ಚಿರುವುದರಿಂದ ಇದು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇದರಲ್ಲಿನ ಪೊಟ್ಯಾಸಿಯಂ ನಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಮಾಡುತ್ತದೆ.
5. ಅಸಿಡಿಟಿ ಹಾಗು ಗ್ಯಾಸ್ಟ್ರಿಕ್ ನಿಯಂತ್ರಣ: ನಿಮಗೆ ಪದೇ ಪದೇ ಅಸಿಡಿಟಿ ಹಾಗು ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬಂದಲ್ಲಿ ಬಾಳೆಹಣ್ಣಿನ ದಿಂಡಿನ ಜ್ಯೂಸು ನಿಮ್ಮ ಸಮಸ್ಯೆ ಅನ್ನು ಪರಿಹಾರ ಮಾಡುತ್ತದೆ.
ನಿಮಗೆ ಈ ಬಾಳೆಹಣ್ಣಿನ ದಿಂಡಿನ ಉಪಯೋಗಗಳೆನು ಅಂತ ಒಮ್ಮೆ ನೋಡಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನೂ ಓದಿ: