ನಿಮ್ಮ ಡ್ರೈ ಮತ್ತು ಎಣ್ಣೆಯ ಚರ್ಮಕ್ಕೆ ಹೆಸರುಕಾಳಿನ ಫೇಸ್ ಪ್ಯಾಕ್
ನಿಮ್ಮ ಮುಖ ಬೇಸಿಗೆ ಬಿಸಲಿನಿಂದ ಕಪ್ಪಗಾಗಿದೆ ನಾ? ನೀವು ನ್ಯಾಚುರಲ್ ಆಗಿ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಲು ಬಯಸಿದರೆ ಮನೆಯಲ್ಲೇ ಸಿಗುವ ಹಾಗು ಸುಲಭವಾಗಿ ತಯಾರಾಗುವ ಹೆಸರು ಕಾಲಿನ ಫೇಸ್ ಪ್ಯಾಕ್ ಅನ್ನು ಒಮ್ಮೆ ಮಾಡಿ ನೋಡಿ. ಹಾಗಾದರೆ ಬನ್ನಿ ಯಾವ ಯಾವ ಚರ್ಮಕ್ಕೆ ಯಾವ ರೀತಿ ಫೇಸ್ ಪ್ಯಾಕ್ ರೆಡಿ ಮಾಡೋದು ಅಂತ ನೋಡೋಣ
- ನಿಮ್ಮದು ಒಣ (ಡ್ರೈ ) ಚರ್ಮವಾದರೆ: 1 ಚಮಚ ಹೆಸರುಬೇಳೆ ಪೌಡರ್ ಗೆ 1 ಚಮಚ ಜೇನುತುಪ್ಪ ಬೆರೆಸಿ ಹಾಗು ಅದಕ್ಕೆ 1 ಚಮಚ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಬೆರೆಸಿ ಚೆನ್ನಾಗಿ ಕಲಸಿ ಕೊಳ್ಳಿ ಬೇಕಿದ್ದರೆ ಸ್ವಲ್ಪ ನೀರನ್ನು ಹಾಕಿ ಕಲಸಿಕೊಳ್ಳಿ .ಈವಾಗ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.
- ನಿಮ್ಮ ಚರ್ಮ ಎಣ್ಣೆ (ಆಯಲಿ )ಆಗಿದ್ದರೆ: 1 ಚಮಚ ಹೆಸರು ಕಾಳಿನ ಪೌಡರ್ ಗೆ 1 ಚಮಚ ಟೊಮೊಟೊ ಜ್ಯೂಸು ಹಾಕಿ ಹಾಗು ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ .ಈವಾಗ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿರಿ. ಒಣಗಿದ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.
ಸೂಚನೆ : ಯಾವದೇ ಫೇಸ್ ಪ್ಯಾಕ್ ಹಚ್ಚಿಕೊಳ್ಳುವ ಮುಂಚೆ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಂಡಿರಬೇಕು . ಹೆಸರು ಕಾಲಿನ ಪೌಡರ್ ರೆಸಿಪಿ ಗೆ ಇಲ್ಲಿ ಕ್ಲಿಕ್ ಮಾಡಿ. ನಿಮಗೆ ಈ ನಿಮ್ಮ ಡ್ರೈ ಮತ್ತು ಎಣ್ಣೆಯ ಚರ್ಮಕ್ಕೆ ಹೆಸರು ಕಾಳಿನ ಫೇಸ್ ಪ್ಯಾಕ್ ಇಷ್ಟ ವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ ಹಾಗು ಹೆಚ್ಚಿನ ಬ್ಯೂಟಿ ಟಿಪ್ಸ್ ಗಾಗಿ kannada.chotanews.in ನೋಡುತ್ತಿರಿ