ಮನೆಯಲ್ಲೇ ಮಾಡಿ ಬೇಕರಿ ಸ್ಟೈಲ್ ಮಸಾಲಾ ಶೇಂಗಾ(ಕಡಲೆಬೀಜ)
ಮನೆಯಲ್ಲೇ ಮಾಡಿ ಬೇಕರಿ ಸ್ಟೈಲ್ ಮಸಾಲಾ ಶೇಂಗಾ(ಕಡಲೆಬೀಜ)
ಯಾರಿಗೆ ಇಷ್ಟ ಇಲ್ಲ ಹೇಳಿ ಮಸಾಲಾ ಶೇಂಗಾ ಅಂದ್ರೆ. ಅದನ್ನು ನಾವು ಮನೆಯಲ್ಲೇ ಸುಲಭವಾಗಿ ಹೇಗೆ ಮಾಡಬಹುದು ಅಂತ ನೋಡೋಣ ಬನ್ನಿ.
ಬೇಕಾಗುವ ಸಾಮಗ್ರಿಗಳು:
- 1cup ಕಡಲೆ ಹಿಟ್ಟು
- 1cup ಅಕ್ಕಿ ಹಿಟ್ಟು
- 2cup ಕಡಲೆ ಬೀಜ(ಶೇಂಗಾ)
- ಉಪ್ಪು
- ಖಾರದ ಪುಡಿ
- ಗರಂ ಮಸಾಲಾ
- ಮೆಣಸಿನ ಪುಡಿ
ಮಾಡುವ ವಿಧಾನ:
- ಮೊದಲಿಗೆ ಕಡಲೆ ಹಿಟ್ಟು ಹಾಗು ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ನಂತರ ಅದಕ್ಕೆ ಎಲ್ಲ ಮಸಾಲಗಳನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ ಕೊಳ್ಳಿ. ಹಿಟ್ಟಿನ ಹದ ಗಟ್ಟಿ ಆಗಿರಬೇಕು.
- ಈವಾಗ ಶೇಂಗಾ(ಕಡಲೆ ಬೀಜ)ಹಾಕಿ ಚೆನ್ನಾಗಿ ಕಲಸಿ. ಈವಾಗ ಈ ಕಲಸಿದ ಹಿಟ್ಟನ್ನು 30 ನಿಮಿಷ ನೆನೆಯಲು ಬಿಡಿ.
- ಒಂದು ಕಡೆ ಕರೆಯಲು ಎಣ್ಣೆ ಅನ್ನು ಕಾಯಿಸಲು ಇಡೀ.
- ಎಣ್ಣೆ ತುಂಬ ಕಾಯಿದಿರಬಾರದು. ಇದನ್ನು ಮಧ್ಯಮ ಉರಿಯಲ್ಲೆ ಇಟ್ಟು ಕಾಯಿಸಬೇಕು.
- ಎಣ್ಣೆ ಕಾಯಿದಾ ನಂತರ ರೆಡಿ ಆಗಿರುವ ಕಡಲೆಬೀಜದ ಹಿಟ್ಟನ್ನು ಕೆರೆಯುವ ಚಮಚದಿಂದ ಎಣ್ಣೆಯಲ್ಲಿ ಅದ್ದಿ ಕರೆಯಿರಿ.
- ಈವಾಗ ಬಿಸಿ ಬಿಸಿ ಮಸಾಲಾ ಶೇಂಗಾ(ಕಡಲೆ ಬೀಜ) ತಿನ್ನಲು ಸಿದ್ದ.
ನಿಮಗೆ ಈ ಮನೆಯಲ್ಲೇ ಮಾಡಿ ಬೇಕರಿ ಸ್ಟೈಲ್ ಮಸಾಲಾ ಶೇಂಗಾ(ಕಡಲೆಬೀಜ) ಇಷ್ಟ ಆದಲ್ಲಿ like and share ಮಾಡಿ. ಹೆಚ್ಚಿನ receipe ಗಾಗಿ kannada.chotanews.in ನೋಡುತ್ತಿರಿ.