ಕೋಕಂ ಅಥವಾ ಮುರುಗುಳಿ ಜ್ಯೂಸು ಮಾಡುವ ಸುಲಭವಾದ ವಿಧಾನ
ಕೋಕಂ ಅನ್ನು ಪಿತ್ತ ದೋಷ ನಿವಾರಣೆಗೆ ಮಲಭದ್ದತೆ, ಅಸಿಡಿಟಿ ನಿವಾರಣೆ ಮಾಡಲು ಉಪಯೋಗವಾಗುತ್ತದೆ. ಬನ್ನಿ ನಾವು ಮನೇಲೆ ಸುಲಭವಾಗಿ ಹೇಗೆ ಕೋಕಂ ಜ್ಯೂಸು ಮಾಡುವುದು ನೋಡೋಣ.
ಬೇಕಾಗುವ ಸಾಮಗ್ರಿಗಳು:
- ಕೋಕಂ 1 ಕಪ್
- ಸಕ್ಕರೆ 1 ಕಪ್
- ಉಪ್ಪು 1 ಚಿಟಿಕೆ
- ನೀರು 1 ಗ್ಲಾಸ್
ಮಾಡುವ ವಿಧಾನ :
1) ಕೋಕಂ ಹಣ್ಣಿನ ಜ್ಯೂಸು :
- 1 ಕಪ್ ಕೋಕಂ ಹಣ್ಣನು ತೆಗೆದುಕೊಳ್ಳಿ.
- ಅದನ್ನು ಸೆಪ್ಪೆ ಮತ್ತು ಬೀಜ ಎರಡನ್ನು ಬೇರ್ಪಡಿಸಿ.
- ಮೊದಲಿಗೆ ಬೀಜವನ್ನು ಚೆನ್ನಾಗಿ ಹಿಂಡಿ ರಸ ತೆಗೆದುಕೊಳ್ಳಿ.
- ನಂತರ ಸಿಪ್ಪೆಯನ್ನು ಸ್ವಲ್ಪ ನಿರು ಹಾಕಿ ರುಬ್ಬಿಕೊಳ್ಳಿ.
- ನಂತರ ಉಪ್ಪು ಹಾಗು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಈವಾಗ ಕೋಕಂ ಜ್ಯೂಸು ಕುಡಿಯಲು ರೆಡಿ.
2) ಒಣಗಿದ ಕೋಕಂ ಸಿಪ್ಪೆ ಜ್ಯೂಸು:
- 1 ಕಪ್ ಒಣಗಿದ ಕೋಕಂ ಸಿಪ್ಪೆ ಯನ್ನು 5 ರಿಂದ 6 ಗಂಟೆ ನೆನಸಿಡಿ.
- ನಂತರ ನೆನೆಸಿಟ್ಟ ಕೋಕಂ ಅನ್ನು ಚೆನ್ನಾಗಿ ಕುದಿಸಿ ಅದರ ರಸ ತೆಗೆದುಕೊಳ್ಳಿ.
- ಈವಾಗ ಈ ರಸವನ್ನು ನೀರಿನಲ್ಲಿ ಸಕ್ಕರೆ ಮತ್ತು ಉಪ್ಪಿನಜೊತೆ ಕರಗಿಸಿಕೊಳ್ಳಿ.
- ಈವಾಗ ಕೋಕಂ ಜ್ಯೂಸು ಕುಡಿಯಲು ಸಿದ್ದ.
ನಿಮಗೆ ಈ ಕೋಕಂ ಅಥವಾ ಮುರುಗುಳಿ ಜ್ಯೂಸು ಮಾಡುವ ಸುಲಭವಾದ ವಿಧಾನ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ kannada.chotanews.in ನೋಡುತ್ತಿರಿ.
ಇದನ್ನೂ ಓದಿ: ಮನೆಯಲ್ಲಿ ಹೋಟೆಲ್ ಶೈಲಿಯ ಗೋಬಿ ಮಂಚೂರಿಯನ್
ಇದನ್ನೂ ಓದಿ: ಮನೆಯಲ್ಲೇ ಮಾಡಿ ಬೇಕರಿ ಸ್ಟೈಲ್ ಮಸಾಲಾ ಶೇಂಗಾ(ಕಡಲೆಬೀಜ)