ಯಮ್ಮಿ ಅಂಡ್ ಟೇಸ್ಟಿ ಕ್ರಿಸ್ಪಿ ಆನಿಯನ್(ಈರುಳ್ಳಿ) ರಿಂಗ್ ಮಾಡಿ ನೋಡಿ

ಯಮ್ಮಿ ಅಂಡ್ ಟೇಸ್ಟಿ ಕ್ರಿಸ್ಪಿ ಆನಿಯನ್(ಈರುಳ್ಳಿ) ರಿಂಗ್ ಮಾಡಿ ನೋಡಿ

ಆನಿಯನ್ ರಿಂಗ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದನ್ನು ನಾವು ಮನೆಯಲ್ಲೇ ಕ್ರಿಸ್ಪಿ ಅಂಡ್ ಟೇಸ್ಟಿ ಆಗಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. 

ಬೇಕಾಗುವ ಸಾಮಗ್ರಿಗಳು: 

  • 2 ದೊಡ್ಡ ಈರುಳ್ಳಿ 
  • 1 ಕಪ್ ಮೈದಾ ಹಿಟ್ಟು 
  • 1/4 ಕಪ್ ಕಾರ್ನ್ ಹಿಟ್ಟು 
  • ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ಮೆಣಸಿನ ಪುಡಿ 1/4 ಚಮಚ 
  • ಬೇಕಿಂಗ್ ಪೌಡರ್ 1/4 ಚಮಚ 
  • ಉಪ್ಪು ರುಚಿಗೆ ತಕ್ಕಸ್ಟು 
  • ಬ್ರೆಡ್ ಕ್ರಮ್ಪ್ಸ್ 1 ಕಪ್ 
  • ಕರಿಯಲು ಎಣ್ಣೆ

ಮನೆಯಲ್ಲೇ ಮಾಡಿ ಬೇಕರಿ ಸ್ಟೈಲ್ ಮಸಾಲಾ ಶೇಂಗಾ(ಕಡಲೆಬೀಜ)

ಮಾಡುವ ವಿಧಾನ: 

  1. ಮೊದಲಿಗೆ ಈರುಳ್ಳಿ ಅನ್ನು ರಿಂಗ್ ಆಕಾರದಲ್ಲಿ ಹೆಚ್ಚಿಕೊಳ್ಳಿ. 
  2. ನಂತರ ಒಂದು ಬೌಲ್ ಅಲ್ಲಿ ಮೈದಾ, ಕಾರ್ನ್ ಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪೌಡರ್, ಉಪ್ಪು ಹಾಕಿ ಕಲಸಿಕೊಳ್ಳಿ. 
  3. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಿ. ಈವಾಗ ಹೆಚ್ಚಿರುವ ರಿಂಗ್ ಆಕಾರದ ಈರುಳ್ಳಿ ಅನ್ನು ಒಂದೊಂದಾಗಿ ಹಿಟ್ಟಿನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಪ್ಸ್ ಅಲ್ಲಿ ಅದ್ದಿ  ಎಣ್ಣೆ ಅಲ್ಲಿ ಕಂದು ಬಣ್ಣ ಬರುವವರೆಗೂ ಕರೆದು ತೇಗಿಯಿರಿ. 
  4. ಈಗ ಕ್ರಿಸ್ಪಿ ಈರುಳ್ಳಿ ರಿಂಗ್ ತಿನ್ನಲು ಸಿದ್ದ. 

ಮನೆಯಲ್ಲಿ ಹೋಟೆಲ್ ಶೈಲಿಯ ಗೋಬಿ ಮಂಚೂರಿಯನ್

ನಿಮಗೆ ಈ ಅಡುಗೆ ರೆಸಿಪಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಅಡುಗೆ ರೆಸಿಪಿ ಗಾಗಿ  kannada.chotanews.in ನೋಡುತ್ತಿರಿ.