ತೊಡೆ, ಕೈ ಸಂದುಗಳಲ್ಲಿ ತುರಿಕೆ ಇದೆಯಾ? ಇಲ್ಲಿದೆ ಮನೆಮದ್ದು

ತೊಡೆ, ಕೈ ಸಂದುಗಳಲ್ಲಿ ತುರಿಕೆ ಇದೆಯಾ? ಇಲ್ಲಿದೆ ಮನೆಮದ್ದು

ನಿಮಗೆ ತೊಡೆ ಹಾಗು ಕೈ ಸಂದುಗಳಲ್ಲಿ ತುರಿಕೆ ಇದೆಯಾ? ತೊಡೆ ಹಾಗು ಕೈ ಸಂದುಗಳಲ್ಲಿ ಗಜಕರ್ಣ ದಂತಹ ಸಮಸ್ಯೆ ಆಗಿದೆಯಾ? ಹಾಗಾದರೆ ಈ ಮನೆಮದ್ದನ್ನು ಒಮ್ಮೆ ಉಪಯೋಗಿಸಿ ನೋಡಿ. ತೊಡೆ ಹಾಗು ಕೈ ಸಂದುಗಳಲ್ಲಿ ತುರಿಕೆ ಕಾಣುವುದು ಒಂದು ರೋಗವೇನಲ್ಲ ಆದರೆ ತುರಿಕೆ ಕಾಣಿಸಿಕೊಂಡರೆ ತುಂಬಾ ತೊಂದರೆ ಆಗುತ್ತದೆ. ಇದಕ್ಕೆ ಈ ಕೆಳಗೆ ಹೇಳಿರುವ ಮದ್ದುಗಳಲ್ಲಿ ಯಾವದಾದರೊಂದನ್ನು ನೀವು ಗುಣಮುಖವಾಗುವ ವರೆಗೂ ಹಚ್ಚುತ್ತಾ ಬನ್ನಿ. 

  • 2 ಚಮಚ ಅಲೋವೆರಾ ಜ್ಯೂಸ್ ಗೆ 2 ಚಮಚ ಗ್ರೀನ್ ಟೀ ಹಾಗು 2 ಚಮಚ ಲ್ಯಾವೆಂಡರ್ ವಾಟರ್ ಅನ್ನು ಮಿಕ್ಸ್ ಮಾಡಿ. ಇದನ್ನು ನೋವು ಇರುವ ಜಾಗಕ್ಕೆ ಹಚ್ಚುತ್ತಾ ಬನ್ನಿ . ಇದನ್ನು ದಿನಾಲು 2 ಸರಿ ಹಚ್ಚಬೇಕು. 
  • 3 ಚಮಚ ಅರಶಿನ ಪುಡಿಗೆ 1 ಚಮಚ ನೀರನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿ ಕೊಳ್ಳಿ. ಒಣಗಿದ ನಂತರ ತೊಳೆದುಕೊಳ್ಳಿ. ಹೀಗೆ ಗುಣಮುಖ ಆಗುವ ವರೆಗೂ ಮಾಡುತ್ತ ಬನ್ನಿ. 
  • 3 ಸ್ಪೂನ್ ಜೇನುತುಪ್ಪಕ್ಕೆ 3 ಚಮಚ ಉಗುರು ಬೆಚ್ಚಗಿನ ನೀರನ್ನು ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ನೋವಿರುವ ಜಾಗಕ್ಕೆ ಹಚ್ಚುತ್ತಾ ಬನ್ನಿ. ಇನ್ನು ನೋವು ಜಾಸ್ತಿ ಇದ್ದರೆ ನೀವು ವೈದ್ಯರನ್ನು ಭೇಟಿಮಾಡಿ.
  • ನಿಮಗೆ ಈ ಲೇಖನ ಇಷ್ಟವಾದರೆ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ  kannada.chotanews.in  ನೋಡುತ್ತಿರಿ