ನಿಮ್ಮ ಹೊಳೆಯುವ ಚರ್ಮಕ್ಕಾಗಿ ಹೆಸರು ಕಾಳಿನ ಪೌಡರ್ .!!
ಹೆಸರು ಕಾಳುಗಳನ್ನು ನಾವು ಬರಿ ತಿನ್ನುವುದಕ್ಕೆ ಮಾತ್ರವಲ್ಲ ನಮ್ಮ ಸೌಂದರ್ಯಕ್ಕೂ ಕೂಡ ಬಳಸಬಹುದು. ಅದರಲ್ಲಿ ಒಂದು ಅದನ್ನು ಪೌಡರ್ ಮಾಡಿ ಉಪಯೋಗಿಸುವುದು. ಹಾಗಾದರೆ ಬನ್ನಿ ಹೇಗೆ ಹೆಸರು ಕಾಳಿನ ಪೌಡರ್ ಮಾಡುವುದು ಅಂತ ನೋಡೋಣ.
ಮೊದಲಿಗೆ 1 ಬೌಲ್ ಅಲ್ಲಿ 2 ಕಪ್ ಹೆಸರು ಬೆಳೆ ತೆಗೆದುಕೊಳ್ಳಿ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ .
ಈವಾಗ ತೊಳೆದುಕೊಂಡ ಹೆಸರು ಕಾಳುಗಳನ್ನು ಅರ್ಧ ಬೇಯುವವರೆಗೂ ಕುದಿಸಿರಿ.
ಈವಾಗ ಕಾಳುಗಳಲ್ಲಿರುವ ನೀರನ್ನು ಸಂಪೂರ್ಣವಾಗಿ ಸೋಸಿಕೊಳ್ಳಿ.
ನಂತರ ಒಂದು ಪಾತ್ರೆಗೆ ಹೆಸರು ಕಾಳುಗಳನ್ನು ತೆಗೆದುಕೊಳ್ಳಿ.
ಇದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿಕೊಳ್ಳಿ.
ಈವಾಗ ಒಣಗಿದ ಕಾಳುಗಳನ್ನು ಚೆನ್ನಾಗಿ ರುಬ್ಬಿಕೊಂಡು ಪೌಡರ್ ಮಾಡಿಕೊಳ್ಳಿ.
ಈ ಪೌಡರ್ ಅನ್ನು ನೀವು ಒಂದು ಏರ್ ಟೈಟ್ ಕಂಟೇನರ್ ಅಲ್ಲಿ ಹಾಕಿ ಮುಚ್ಚಿಟ್ಟುಕೊಳ್ಳಿ. ಹೆಸರು ಕಾಳಿನ ಫೇಸ್ ಮಾಸ್ಕ ಗೆ ಇಲ್ಲಿ ಕ್ಲಿಕ್ ಮಾಡಿ. ನಿಮಗೆ ಈ ಹೆಸರು ಕಾಳಿನ ಪೌಡರ್ ರೆಸಿಪಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ರೆಸಿಪಿ ಗಾಗಿ kannada.chotanews.in ನೋಡುತ್ತಿರಿ