ತಲೆಹೊಟ್ಟು ಮತ್ತು ತುರಿಕೆಗೆ ಮನೆಮದ್ದು
ತಲೆಹೊಟ್ಟು ಮತ್ತು ತುರಿಕೆ ನಿಮ್ಮನ್ನು ಚಿಂತೆಯನ್ನಾಗಿಸಿದೆಯೆ? ಸುಮಾರು 99% ಜನರು ತಲೆಹೊಟ್ಟು ಮತ್ತು ತುರಿಕೆ ನೆತ್ತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಮತ್ತು ಅದರಿಂದ ಹೊರಬರಲು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಸರಳವಾಗಿ ಮನೆಯಲ್ಲಿ ಮಾಡಿದ ಕೆಲವು ಪರಿಹಾರೋಪಾಯಗಳನ್ನು ಮೂರು ವಿಧದಲ್ಲಿ ನೀಡಲಾಗಿದೆ. ಬನ್ನಿ ಅದರ ಬಗ್ಗೆ ತಿಳಿಯೋಣ.
- ಅರ್ಧ ಕಪ್ ಬೇವಿನ ರಸ, ಅರ್ಧ ನಿಂಬೆ, ಅರ್ಧ ಕಪ್ ಶುಂಠಿ ರಸ ತೆಗೆದುಕೊಳ್ಳಿ. ಎಲ್ಲವನ್ನೂ ಒಟ್ಟಿಗೆ ಬೆರೆಸಿ ಮತ್ತು ನಿಮ್ಮ ನೆತ್ತಿಗೆ ಹತ್ತಿಯೊಂದಿಗೆ ಹಚ್ಚಿ. 20 ನಿಮಿಷ ಕೂದಲು ಒಣಗಲು ಬಿಡಿ ನಂತರ ಸ್ನಾನ ಮಾಡಿ. ಉತ್ತಮ ಫಲಿತಾಂಶ ಪಡೆಯಲು 3 ವಾರಗಳವರೆಗೆ ವಾರದಲ್ಲಿ ಎರಡು ಬಾರಿ ಪುನರಾವರ್ತಿಸಿ.
- ಅರ್ಧ ಕಪ್ ಅಲೋವೆರಾ ಜ್ಯೂಸ್, 2 ಚಮಚ ನಿಂಬೆ ರಸವನ್ನು ಒಟ್ಟಿಗೆ ಬೆರೆಸಿ ನಂತರ ನಿಮ್ಮ ನೆತ್ತಿಗೆ ಹಚ್ಚಿ, 20 ನಿಮಿಷಗಳ ಕಾಲ ಒಣಗಲು ಬಿಡಿ. ಒಮ್ಮೆ ಒಣಗಿದ ಮೇಲೆ ಸ್ನಾನವನ್ನು ಮಾಡಿ. ನೆತ್ತಿಯ ತಲೆಹೊಟ್ಟು ಮತ್ತು ತುರಿಕೆ ಸಮಸ್ಯೆಯನ್ನು ತೊಡೆದುಹಾಕಲು 3 ತಿಂಗಳ ಕಾಲ ವಾರದಲ್ಲಿ ಎರಡು ಬಾರಿ ಮಾಡಿ.
- ನಿಮ್ಮ ನೆತ್ತಿಗೆ ಅರ್ಧ ಕಪ್ ಈರುಳ್ಳಿ ರಸವನ್ನು ಹಾಕಿ 10 ನಿಮಿಷ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ನೆತ್ತಿಯ ತಲೆಹೊಟ್ಟು ಮತ್ತು ತುರಿಕೆ ಸಮಸ್ಯೆಯನ್ನು ತೊಡೆದುಹಾಕ ಬಹುದು, ಉತ್ತಮ ಫಲಿತಾಂಶಕ್ಕಾಗಿ 3 ತಿಂಗಳ ಕಾಲ ವಾರಕ್ಕೊಮ್ಮೆ ಎರಡು ಬಾರಿ ಮಾಡಿ.
ಈ ಲೇಖನವು ನಿಮ್ಮ ತಲೆ ಹೊಟ್ಟು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸುತ್ತೇವೆ. ನೀವು ಯಾವುದೇ ಸಲಹೆಗಳನ್ನು ನೀಡಲು ಬಯಸಿದರೆ ದಯವಿಟ್ಟು ಕಾಮೆಂಟ್ಗಳನ್ನು ಕಳುಹಿಸಿ ಮತ್ತು ನಮ್ಮ ಲೇಖನವನ್ನು ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ.