ಚೀನಾಗೆ ಟಾಟಾ, ಭಾರತದತ್ತ ಆ್ಯಂಪಲ್

ಚೀನಾಗೆ ಟಾಟಾ, ಭಾರತದತ್ತ ಆ್ಯಂಪಲ್

ಕೊರೊನದಿಂದಾಗಿ ಅಮೇರಿಕ ಜಪಾನ್ ಸೇರಿದಂತೆ ಹಲವು ಕಂಪನಿಗಳು ಚೀನಾದಿಂದ ಸ್ಥಳಾಂತರಕ್ಕೆ ಮುಂದಾಗಿದೆ. ಇದರಲ್ಲಿ ಆ್ಯಂಪಲ್ ಕಂಪನಿಯು ಒಂದು. ಆ್ಯಂಪಲ್ ಕಂಪನಿಯು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಭಾರತಕ್ಕೆ ಆಗವಿಸಲು ಒಲವು ತೋರಿಸಿದೆ. ಎಲ್ಲವೂ ಅಂದು ಕೊಂಡಂತೆ ಆದರೆ ಚೀಣದಲ್ಲಿರುವ ಉತ್ಪಾದನಾ ಘಟಕದಲ್ಲಿ ಶೇಕಡಾ 20 ರಷ್ಟು ಭಾರತಕ್ಕೆ ಸ್ಥಳಾಂತರಿಸಲಾಗುತ್ತದೆ. ಇದರಿಂದ ಮುಂದಿನ 5  ವರ್ಷದಲ್ಲಿ 40 ಬಿಲಿಯನ್ ಅಮೇರಿಕನ್ ಡಾಲರ್ ನಷ್ಟು ಉತ್ಪನ್ನಗಳನ್ನು ಭಾರತದಿಂದ ರಫ್ತು ಮಾಡಲು ಆ್ಯಂಪಲ್ ನಿರ್ಧರಿಸಿದೆ.