ಕೂದಲು ಸಮೃದ್ಧವಾಗಿ ಬೆಳೆಯಲು ಹೀಗೆ ಮಾಡಿ

ಕೂದಲು ಸಮೃದ್ಧವಾಗಿ ಬೆಳೆಯಲು ಹೀಗೆ ಮಾಡಿ

ವಿಜ್ಞಾನದ ಪ್ರಕಾರ, ಕೂದಲು ದಿನಕ್ಕೆ 0.3 ರಿಂದ 0.5 ಮಿ.ಮೀ, ತಿಂಗಳಿಗೆ 1 ರಿಂದ 1.5 ಸೆಂ.ಮೀ ಮತ್ತು ವರ್ಷಕ್ಕೆ 12 ರಿಂದ 15 ಸೆಂ.ಮೀ.ವರೆಗೆ ಬೆಳೆಯುತ್ತದೆ. ಕೂದಲು ದೇಹದಲ್ಲಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಅಂಗಾಂಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಷ್ಟೇ ವೇಗವಾಗಿ ಕೂದಲು ಹಾನಿಗೊಳಗಾಗುತ್ತಿದೆ. ಕೆಳಗೆ ಕೊಟ್ಟಿರುವ ವಿಧಾನವನ್ನು ಅನುಸರಿಸಿದರೆ ಹಾನಿಗೊಳಗಾಗುವುದನ್ನು ತಡೆಗಟ್ಟಬಹುದು. ಬನ್ನಿ ಅವು ಯಾವುವು ಎಂದು ತಿಳಿಯೋಣ.

ಈರುಳ್ಳಿ  ರಸ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ:
ಕೂದಲು ಪುನಃ ಬೆಳೆಯಲು ಈರುಳ್ಳಿ ರಸದಿಂದಾಗುವ ಅನುಕೂಲಗಳು ಎಲ್ಲರಿಗೂ ತಿಳಿದಿವೆ. ಅಲೋಪೆಸಿಯಾ ಅರೆಟಾ ಚಿಕಿತ್ಸೆಯಲ್ಲಿ ಈರುಳ್ಳಿ ರಸ ಪರಿಣಾಮಕಾರಿ ಎಂದು ಸಾಬೀತಾಗಿದೆ. ಈರುಳ್ಳಿ ಕೂದಲಿನ ಕೋಶಕಕ್ಕೆ ನೇರ ಪೋಷಣೆಯನ್ನು ನೀಡುತ್ತದೆ. ಈರುಳ್ಳಿ ಜೊತೆ ತೆಂಗಿನ ಎಣ್ಣೆಯನ್ನು ಬೆರೆಸಿದಾಗ ಪ್ರಯೋಜನಗಳು ದ್ವಿಗುಣ. ತೆಂಗಿನ ಎಣ್ಣೆ ಕೂದಲಿನ ಎಳೆಯ ನೈಸರ್ಗಿಕ ಎಣ್ಣೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದು ಶುಷ್ಕತೆಯನ್ನು ತಡೆಯುತ್ತದೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಮತ್ತು ವಿಟಮಿನ್ ಈ ಹೆಚ್ಚಾಗಿದೆ.

ನಿಮ್ಮ ಕಂಡಿಷನರ್ ಅನ್ನು ಎಂದಿಗೂ ಬಿಡಬೇಡಿ:
ನಿಮ್ಮ ಕೂದಲಿಗೆ ಕಂಡಿಷನರ್ ಹಚ್ಚುವುದನ್ನು ಮರೆಯಬೇಡಿ. ಇದು ಕೇವಲ ಕೆಲವು ಕೂದಲಿಗೆ ಮಾತ್ರ ಸೀಮಿತ ಎಂದು ಭಾವಿಸಬೇಡಿ, ಇದು ಎಲ್ಲ ರೀತಿಯ ಕೂದಲುಗಳಿಗೆ ಉತ್ತಮ. ಕೂದಲು ತೊಳೆದ ನಂತರ ಕಂಡಿಷನರ್ ಅನ್ನು ಹಚ್ಚಿ. ಟವೆಲ್ ನಿಂದ ಉಂಟಾಗುವ ಹಾನಿಯನ್ನು ಕಂಡಿಷನರ್ ತಡೆಯುತ್ತದೆ. 

ಕೆಲವು ಮ್ಯಾಜಿಕ್ ಪದಾರ್ಥಗಳಿಂದ ಸಹಾಯ:
ಉದಾಹರಣೆಗೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ರಸ, ಶಿಕಾಕೈ, ಆಪಲ್ ಸೈಡರ್ ವಿನೆಗರ್ ಮತ್ತು ತೆಂಗಿನ ಹಾಲು ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಇವು ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ನಿಮ್ಮ ನೆತ್ತಿ ಮತ್ತು ಕೂದಲಿನ ಆರೋಗ್ಯಕ್ಕೂ ಸಹಾಯ ಮಾಡುತ್ತದೆ.

ಕೂದಲು ಉಸಿರಾಡಲು ಬಿಡಿ:
ನಮ್ಮ ಕಾರ್ಯನಿರತ ವೇಳಾಪಟ್ಟಿಯಿಂದ ನಮ್ಮ ಕೂದಲಿನ ಮೇಲೆ ಹಲವಾರು ಪರಿಣಾಮವನ್ನು ಬೀರಬಹುದು. ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ. ಇನ್ನೊಂದು ಮುಖ್ಯ ವಿಷಯವೆಂದರೆ ಹೊರಗೆ ಹೋಗುವಾಗ ನಿಮ್ಮ ಕೂದಲನ್ನು ಮುಚ್ಚಿಕೊಳ್ಳುವುದು. ಸೂರ್ಯನ ಉಷ್ಣತೆಯು ನಿಮ್ಮ ಕೂದಲಿಗೆ ನಿಮ್ಮ ಚರ್ಮಕ್ಕೆ ಕೆಟ್ಟ ಹಾನಿಯನ್ನುಂಟುಮಾಡುತ್ತದೆ.

ನಿಮ್ಮ ಆಹಾರವು ಮುಖ್ಯವಾಗಿದೆ:
ಕೆಲವು ಆಹಾರವನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಯೋಟಿನ್ ಅಥವಾ ವಿಟಮಿನ್ ಎಚ್ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ತಿನ್ನಬೇಕು. ಬಯೋಟಿನ್ ಸಮೃದ್ಧವಾಗಿರುವ ಆಹಾರವೆಂದರೆ ಹಾಲು, ಚೀಸ್, ಮೊಟ್ಟೆ, ಎಲ್ಲಾ ರೀತಿಯ ಬೀಜಗಳು, ಹೂಕೋಸು ಮತ್ತು ಆವಕಾಡೊ.

ಇದನ್ನೂ ಓದಿ: ತಲೆಹೊಟ್ಟು ಮತ್ತು ತುರಿಕೆಗೆ ಮನೆಮದ್ದು

ಇದನ್ನೂ ಓದಿ: ಹೊಳೆಯುವ ಚರ್ಮಕ್ಕಾಗಿ ಏಲಕ್ಕಿ ಸ್ಕ್ರಬ್

ಇದನ್ನೂ ಓದಿ: ಕಣ್ಣಿನ ಡಾರ್ಕ್ ಸರ್ಕಲ್ ಗೆ ಮನೆಮದ್ದು