25 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ 

25 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ 

ಬಾಲಿವುಡ್ ನಟ ಅಕ್ಷಯ್ ಕುಮಾರ್  ಪ್ರಧಾನ ಮಂತ್ರಿಯವರ (ನರೇಂದ್ರ ಮೋದಿ) ಪಿಎಂ ಕೇರ್ಸ್ ನಿಧಿಗೆ ೨೫ ಕೋಟಿ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ. 

ಕೊರೊನ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಮೋದಿಯವರು ಸಿಟಿಜನ್ ಅಸಿಸ್ಟಂಟ್ಸ್ ಅಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುಯೇಶನ್ ಫಂಡ್ (ಕೇರ್ಸ್ ) ರಚಿಸಿರುವ ಕುರಿತು ತಿಳಿಸಿದ್ದರು. ಈ ನಿಧಿಗೆ ದೇಶದ ಜನರು ದೇಣಿಗೆ ನೀಡುವ ಮೂಲಕ ಕೊರೊನ ವೈರಸ್ ವಿರುದ್ದದ ಹೋರಾಟದಲ್ಲಿ ಕೈ ಜೋಡಿಸಬಹುದು ಎಂದು ತಿಳಿಸಿದ್ದರು. 

ಅದರಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಶನಿವಾರ ತಮ್ಮ ಟ್ವಿಟ್ಟರ್ ನಲ್ಲಿ ೨೫ ಕೋಟಿ ನೆರವು ನೀಡುವುದಾಗಿ ತಿಳಿಸಿದ್ದಾರೆ.