ನಿಮ್ಮ ಹಣೆ ಮೇಲೆ ಮೊಡವೆ ಉಂಟಾಗಲು ಕಾರಣ ಇಲ್ಲಿವೆ?

ನಿಮ್ಮ ಹಣೆ ಮೇಲೆ ಮೊಡವೆ ಉಂಟಾಗಲು ಕಾರಣ ಇಲ್ಲಿವೆ?

ಚರ್ಮದ ಮೇಲಿನ ರಂದ್ರಗಳು ಯಾವಾಗ ಎಣ್ಣೆಯಿಂದ ಅಥವಾ ಸತ್ತ ಜೀವಕೋಶಗಳಿಂದ ಮುಚ್ಚಲ್ಪಡುತ್ತದೆಯೊ ಆವಾಗ ಮೊಡವೆಗಳು ಹುಟ್ಟಿಕೊಳ್ಳುತ್ತವೆ. ಮೊಡವೆಗಳು ಅಥವಾ ಉಬ್ಬುಗಳು ಕಾಣಿಸಿಕೊಳ್ಳುವ ಸಾಮಾನ್ಯ ಪ್ರದೇಶಗಳಲ್ಲಿ ಹಣೆಯು ಒಂದು. ವಯಸ್ಕರ ಮೊಡವೆಗಳು ಮುಖ್ಯವಾಗಿ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗಬಹುದು. ಆದರೆ, ಹಣೆಯ ಮೊಡವೆಗಳಿಗೆ ಕೆಲವು ಕಾರಣಗಳಿವೆ. ಸೆಬಾಸಿಯಸ್ ಗ್ರಂಥಿಗಳಿಂದ ಅಧಿಕವಾಗಿ ತೈಲ ಉತ್ಪತ್ತಿಯಾಗುವುದರಿಂದ ಕೂದಲು ಕಿರುಚೀಲಗಳ ಅಡಚಣೆಗೆ ಕಾರಣವಾಗುತ್ತದೆ. ಕೆಲವು ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿ ಉಂಟಾಗುತ್ತದೆ. ಅನಾರೋಗ್ಯಕರ ಆಹಾರವನ್ನು ಒಳಗೊಂಡಿರುವ ಆಹಾರವು ಮೊಡವೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಬಹುದು. ದೇಹದಲ್ಲಿ ಹೆಚ್ಚು ಎಣ್ಣೆ (ಮೇದೋಗ್ರಂಥಿಗಳ ಸ್ರವಿಸುವಿಕೆಯಿಂದ)ಯಿಂದ ಮೊಡವೆ ಉಂಟಾಗುತ್ತದೆ. ಅನಿಯಮಿತ ಮುಟ್ಟಿನ ಚಕ್ರ, ಒತ್ತಡ, ಬಿಸಿ ಮತ್ತು ಆರ್ದ್ರ ವಾತಾವರಣ ಮತ್ತು ತೈಲ ಆಧಾರಿತ ಮೇಕಪ್ ನಿಂದ ಕೂಡ ಉಂಟಾಗುತ್ತದೆ. ಮೊಡವೆಗಳನ್ನು ಸರಿಯಾಗಿ ಕಾಳಜಿ ವಹಿಸದಿದ್ದರೆ ಮುಖದ ಮೇಲೆ ಕಲೆಯಾಗಿ ಉಳಿದಿಬಿಡುತ್ತದೆ.

ಮೊಡವೆಗಳಿಗೆ ಕೆಲವು ಕಾರಣಗಳು ಇಲ್ಲಿವೆ:

 

1. ಕೆಟ್ಟ ಸೌಂದರ್ಯವರ್ಧಕಗಳು: ನಿಮಗೆ ಸರಿಹೊಂದದ ಕೆಲವು ಮೇಕಪ್ ಅಥವಾ ಕೂದಲಿನ ಉತ್ಪನ್ನಗಳಿಂದಾಗಿ ಹಣೆಯ ಮೊಡವೆಗಳು ಉಂಟಾಗುತ್ತವೆ. ಕೆಲವು ಶ್ಯಾಂಪೂಗಳು, ದ್ರವೌಷಧಗಳು ಅಥವಾ ಜೆಲ್‌ಗಳಲ್ಲಿನ ರಾಸಾಯನಿಕಗಳು ನಿಮ್ಮ ಕೂದಲನ್ನು ಹನಿಗೊಳಿಸಿ ನಿಮ್ಮ  ಸೂಕ್ಷ್ಮ ಚರ್ಮವನ್ನು ಕಿರಿಕಿರಿಗೊಳಿಸಬಹುದು ಮತ್ತು ಇದರಿಂದ ಮೊಡವೆ ಹುಟ್ಟಲು ಕಾರಣವಾಗುತ್ತದೆ.

 

2. ತಲೆಹೊಟ್ಟು ಮತ್ತು ಜಿಡ್ಡಿನ ನೆತ್ತಿ: ತಲೆಹೊಟ್ಟು ಮತ್ತು ಹೆಚ್ಚುವರಿ ಎಣ್ಣೆಯು ಚರ್ಮದ ರಂಧ್ರಗಳನ್ನು ಮುಚ್ಚಿ ಮೊಡವೆಗಳನ್ನು ಉಂಟುಮಾಡುತ್ತದೆ. ಹಣೆಯ ಮೊಡವೆಗಳಿಗೆ ಸಾಮಾನ್ಯ ಕಾರಣವೆಂದರೆ ತಲೆಹೊಟ್ಟು. ಎಣ್ಣೆಯುಕ್ತ ನೆತ್ತಿಯಿರುವ ಜನರು ಹಣೆಯ ಮೇಲೆ, ಎದೆಯ ಮೇಲ್ಭಾಗ ಮತ್ತು ಬೆನ್ನಿನ ಹಿಂಭಾಗದಲ್ಲಿ ಮೊಡವೆಗಳು ಬರುವ ಸಾಧ್ಯತೆ ಇದೆ.

 

3. ಮೊಡವೆಗಳನ್ನು ಚಿವುಟುವುದು: ನಮಗೆ ಗೊತ್ತು ಮೊಡವೆಗಳು ಎಷ್ಟು ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂದು, ಹಾಗಂತ ಅದನ್ನು ಚಿವುಟುವುದು/ಮುಟ್ಟುವುದರಿಂದ ಬ್ಯಾಕ್ಟೀರಿಯಾ ಹರಡಿ ಮತ್ತಷ್ಟು ಮೊಡವೆಗಳು ಉಂಟಾಗುವುದಕ್ಕೆ ಕಾರಣವಾಗಿದೆ. 

 

4. ಜೀರ್ಣ ಕ್ರಿಯೆಯ ತೊಂದರೆಗಳು: ಜೀರ್ಣಾಂಗ ವ್ಯವಸ್ಥೆಯ ಕಾರ್ಯಗಳಿಂದಾಗಿ ನಾವು ತಿನ್ನುವ ಆಹಾರದಿಂದ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕೆಟ್ಟ ಟಾಕ್ಸಿನ್ ಗಳನ್ನು ಹೊರಹಾಕಲು ಸಹ ಸಹಾಯ ಮಾಡುತ್ತವೆ. ಜಠರಗರುಳಿನ ತೊಂದರೆ ಮಲಬದ್ಧತೆ, ಎದೆಯುರಿ ಮತ್ತು ಹೊಟ್ಟೆ ಉಬ್ಬುವುದು ಮೊಡವೆಗಳಿಗೆ ಸಂಬಂಧಿಸಿರಬಹುದು ಎಂದು ಬಹಳಷ್ಟು ಅಧ್ಯಯನಗಳಲ್ಲಿ ಹೇಳಲಾಗಿದೆ. ನಮ್ಮ ದೇಹದ ಒಳಗಡೆ ಜೀರ್ಣಕ್ರಿಯೆಯಲ್ಲಿ ಏನಾದರೂ ತಪ್ಪಾದಾಗ ಮೊಡವೆ, ಡರ್ಮಟೈಟಿಸ್ ಸಮಸ್ಯೆಗಳು ಉಂಟಾಗಬಹುದು.

 

5. ಒತ್ತಡ: ನೀವು ಒತ್ತಡಕ್ಕೊಳಗಾದಾಗ ಹೆಚ್ಚು ಎಣ್ಣೆ (ಮೇದೋಗ್ರಂಥಿಗಳ ಸ್ರಾವ) ಉತ್ಪತ್ತಿಯಾಗುತ್ತದೆ ಅದು ಕೂದಲು ಕಿರುಚೀಲಗಳನ್ನು ಮುಚ್ಚಿ ಹೆಚ್ಚು ಮೊಡವೆಗಳು ರೂಪುಗೊಳ್ಳಲು ಅನುವು ಮಾಡಿಕೊಡುತ್ತದೆ. ಒತ್ತಡ ಅಥವಾ ಮೊಡವೆಗಳು ನೇರವಾಗಿ ಸಂಬಂಧ ಹೊಂದಿವೆ ಎಂದು ಬಹಳಷ್ಟು ಅಥವಾ ಅಧ್ಯಯನಗಳು ತೋರಿಸುತ್ತವೆ. ದೇಹವು ಒತ್ತಡವನ್ನು ಅನುಭವಿಸುವಾಗ ರಕ್ತ ಹಾಗು ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಸಿಗದೆ ಚರ್ಮವು ಮಂದ, ನಿರ್ಜೀವ ಹಾಗು ಮೊಡವೆಗಳಿಗೆ ಗುರಿಯಾಗುತ್ತದೆ. 

ಹಣೆ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಮನೆಮದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ