ಬೇಡಿಕೆ ಕುಸಿತ ಉತ್ಪಾದನೆ ಸ್ಥಗಿತಕ್ಕೆ: ಅಶೋಕ್ ಲೇಲ್ಯಾಂಡ್, ಮಾರುತಿ ಸುಜುಕಿ ನಿರ್ಧಾರ
ವಾಹನಗಳ ಬೇಡಿಕೆ ಕುಸಿದಿರುವ ಕಾರಣ ಚೆನ್ನೈನಲ್ಲಿರುವ ಅಶೋಕ್ ಲೇಲ್ಯಾಂಡ್ ವಾಹನ ತಯಾರಿಕ ಕಂಪನಿಯ ಪ್ರಧಾನ ಕಚೇರಿ ಶುಕ್ರವಾರದಿಂದ ಐದು ದಿನಗಳ ಕಾಲ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿಕೆ ನೀಡಿದ.
ನಿರಂತರವಾಗಿ ವಾಣಿಜ್ಯ ವಾಹನಗಳ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿದ್ದು, ಕಂಪನಿಯ ಹಿತ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ. ಇದು ದೇಶದ ಮೂರನೇ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕ ಕಂಪನಿಯಾಗಿದ. ಆಗಸ್ಟ್ ತಿಂಗಳಲ್ಲಿ ವಾಹನ ಮಾರಾಟವೂ ಶೇ.50 ರಷ್ಟು ಕುಸಿದಿದೆ ಎಂದು ಅಶೋಕ್ ಲೇಲ್ಯಾಂಡ್ ವರದಿ ನೀಡಿದೆ.
ಮಾರುತಿ ಸುಜುಕಿ ಕೂಡ ಗುರುಗ್ರಾಮ ಮತ್ತು ಮಿನೇಸಾರ್ನಲ್ಲಿರುವ ಉತ್ಪಾದನ ಘಟಕಗಳಲ್ಲಿ ಸೆ.7 ರಿಂದ 9ರವರೆಗೆ ಎರಡು ದಿನಗಳಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ಆಗಸ್ಟ್ ತಿಂಗಳಲ್ಲಿ ಶೇ. 33.90 ರಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದೆ.