ಗುಲಾಬಿಯಂತಹ ತುಟಿ ನಿಮ್ಮದಾಗಬೇಕೆ? ಹೀಗೆ ಮಾಡಿ
ಬೇಸಿಗೆಯಲ್ಲಿ ಒಣ ತುಟಿಗಳಿಗೆ ಮನೆಮದ್ದು - ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ಒಣ ತುಟಿಗಳು ಎಲ್ಲಾ ಗುಂಪಿನ ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಒಣ ತುಟಿಗಳು ನಮ್ಮ ಸೌಂದರ್ಯವನ್ನೆ ಕೆಡಿಸಿ ಆತ್ಮವಿಶ್ವಾಸವನ್ನು ಕಡಿಮೆ ಮಾಡಬಹುದು. ಇದು ಚಳಿಗಾಲದಲ್ಲಿ ಮೂಡುವಂತ ಸಮಸ್ಯೆಯಾಗಿದೆ ಆದರೆ ಬೇಸಿಗೆಯಲ್ಲಿ ಒಣ ತುಟಿಗಳು ಬಂದರೆ ಏನು ಮಾಡುವುದು? ಇಲ್ಲಿ ಚಿಂತೆ ಮಾಡಲು ಏನೂ ಇಲ್ಲ ಬೇಸಿಗೆಯಲ್ಲಿ ಒಣ ತುಟಿಗಳಿಗೆ ವಿವಿಧ ಮನೆಮದ್ದುಗಳನ್ನು ನಾವು ತಿಳಿಸುತ್ತೇವೆ.
ಒಣ ತುಟಿಗಳಿಗೆ ಕೆಲವು ಪ್ರಮುಖ ಕಾರಣಗಳು ವಿಟಮಿನ್ ಕೊರತೆ, ಅಲರ್ಜಿ, ನಿರ್ಜಲೀಕರಣ, ಧೂಮಪಾನ, ಬಾಹ್ಯ ಅಂಶಗಳು ಇತ್ಯಾದಿ. ಒಣ ತುಟಿಗಳಿಗೆ ಚಿಕಿತ್ಸೆ ನೀಡಲು ರಾಸಾಯನಿಕ ಉತ್ಪನ್ನಗಳ ಮೊರೆ ಹೋಗುವುದು ಸಹಜ. ಆದರೆ ಅದರಿಂದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಬಹುದು. ನೈಸರ್ಗಿಕ ಮಾರ್ಗಗಳು ಯಾವಾಗಲೂ ಉತ್ತಮ ಮತ್ತು ಅವು ಯಾವುದೇ ಅಡ್ಡಪರಿಣಾಮವನ್ನು ಬೀರುವುದಿಲ್ಲ. ಆದ್ದರಿಂದ ನೀವು ಒಣ ತುಟಿಗಳನ್ನು ಹೊಂದಿದ್ದರೆ ಅದಕ್ಕೆ ಚಿಕಿತ್ಸೆ ನೀಡಲು ನೀವು ಮನೆಮದ್ದುಗಳನ್ನು ಆರಿಸಿಕೊಳ್ಳಬೇಕು.
ಸಕ್ಕರೆ
ಸಕ್ಕರೆ ಇದು ಸತ್ತ ಚರ್ಮದ ಕೋಶಗಳನ್ನು ಹೊರಹಾಕುತ್ತದೆ ಮತ್ತು ಮೃದುವಾದ ಮತ್ತು ನಯವಾದ ತುಟಿಗಳನ್ನು ನೀಡುತ್ತದೆ. ಜೇನುತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಈ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಹಚ್ಚಿ. ನಿಮ್ಮ ಬೆರಳುಗಳ ಸಹಾಯದಿಂದ ನಿಮ್ಮ ತುಟಿಗಳನ್ನು ನಿಧಾನವಾಗಿ ಉಜ್ಜಿ ಮತ್ತು ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ. ಉತ್ತಮ ಮತ್ತು ತ್ವರಿತ ಫಲಿತಾಂಶಗಳನ್ನು ಪಡೆಯಲು ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.
ಜೇನುತುಪ್ಪ
ಜೇನುತುಪ್ಪವು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದ್ದು, ಇದರಲ್ಲಿ ಗುಣಪಡಿಸುವ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ, ಇದು ಒಣ ತುಟಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ನೀವು ಉತ್ತಮ ಫಲಿತಾಂಶವನ್ನು ಪಡೆಯಲು ನೇರವಾಗಿ ಜೇನುತುಪ್ಪವನ್ನು ತುಟಿಗಳಿಗೆ ಹಚ್ಚಬಹುದು ಅಥವಾ ಗ್ಲಿಸರಿನ್ ನೊಂದಿಗೆ ಬೆರೆಸಬಹುದು. ಮಲಗುವ ಮುನ್ನ ಜೇನುತುಪ್ಪವನ್ನು ಹಚ್ಚಿ ಬೆಳಿಗ್ಗೆ ತೊಳೆಯಿರಿ. ನಿಮ್ಮ ತುಟಿಗಳಲ್ಲಿನ ಮೃದುತ್ವವನ್ನು ನೀವು ಗಮನಿಸಬಹುದು.
ಗುಲಾಬಿ ದಳಗಳು
ಗುಲಾಬಿ ದಳಗಳು ನಿಮ್ಮ ಚರ್ಮವನ್ನು ಮೃದುವಾಗಿಸುವುದಲ್ಲದೆ ನಿಮ್ಮ ತುಟಿಗಳಿಗೆ ಅವುಗಳ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. ಗುಲಾಬಿ ದಳಗಳನ್ನು ಹಾಲಿನಲ್ಲಿ ಕೆಲವು ನಿಮಿಷ ನೆನೆಸಿಡಿ. ಅದನ್ನು ಮ್ಯಾಶ್ ಮಾಡಿ ಪೇಸ್ಟ್ ಮಾಡಿಟ್ಟುಕೊಳ್ಳಿ, ನಂತರ ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿ. ಇದನ್ನು ಕೆಲವು ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ವಾರಕ್ಕೆ ಮೂರು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.
ತೆಂಗಿನ ಎಣ್ಣೆ
ಇದು ಅದ್ಭುತವಾದ ಮಾಯಿಶ್ಚರೈಸರ್ ಆಗಿದ್ದು ಅದು ನಿಮ್ಮ ಒಣ ತುಟಿಗಳಿಗೆ ಚಿಕಿತ್ಸೆ ನೀಡುವುದಲ್ಲದೆ ಮತ್ತೆ ಒಣಗದಂತೆ ತಡೆಯುತ್ತದೆ. ತೆಂಗಿನ ಎಣ್ಣೆಯನ್ನು ದಿನಕ್ಕೆ ಹಲವಾರು ಬಾರಿ ಸರಳವಾಗಿ ಹಚ್ಚುವುದರಿಂದ ನಿಮ್ಮ ತುಟಿಗಳ ಶುಷ್ಕತೆ ಕಡಿಮೆಯಾಗುತ್ತದೆ.
ಹಾಲಿನ ಕೆನೆ
ನಮಗೆಲ್ಲರಿಗೂ ತಿಳಿದಿರುವಂತೆ ಮಿಲ್ಕ್ ಕ್ರೀಮ್ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ ಮತ್ತು ಅದು ನಿಮ್ಮ ತುಟಿಗಳಿಗೆ ಅತ್ಯುತ್ತಮವಾದ ಮಾಯಿಶ್ಚರೈಸರ್ ನೀಡುತ್ತದೆ. ನೀವು ನೇರವಾಗಿ ನಿಮ್ಮ ತುಟಿಗಳಿಗೆ ಹಾಲಿನ ಕೆನೆ ಹಚ್ಚಬಹುದು, ಅದನ್ನು ನಿಮಿಷಗಳ ಕಾಲ ಬಿಡಿ. ಮತ್ತು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ತುಟಿಗಳು ಮೃದುವಾಗುವುದನ್ನು ಕಾಣಬಹುದು.
ಸೌತೆಕಾಯಿ
ಒಣ ತುಟಿಗಳಿಗೆ ಚಿಕಿತ್ಸೆ ನೀಡಲು ಸೌತೆಕಾಯಿ ಅದ್ಭುತ ಮತ್ತು ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ನೀರಿನಾಂಶ ಹೆಚ್ಚಾಗುವುದಲ್ಲದೇ ತುಟಿಯು ಒಣಗದಂತೆ ತಡೆಯುತ್ತದೆ ಅಥವಾ ಇದರ ರಸವನ್ನು ತುಟಿಗಳಿಗೆ ಹಚ್ಚಿ. ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಒಣ ತುಟಿಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹಣೆ ಮೇಲಿನ ಮೊಡವೆಗಳಿಗೆ ಮನೆಮದ್ದು, ಒಮ್ಮೆ ಪ್ರಯತ್ನಿಸಿ ನೋಡಿ
ಇದನ್ನೂ ಓದಿ: ಕೂದಲು ಸಮೃದ್ಧವಾಗಿ ಬೆಳೆಯಲು ಹೀಗೆ ಮಾಡಿ
ಇದನ್ನೂ ಓದಿ: ಫಳ ಫಳ ಹೊಳೆಯುವ ಮುಖಕ್ಕಾಗಿ ಮನೆಯಲ್ಲೇ ಅಲೋವೆರಾ ಫೇಷಿಯಲ್