ದುಭಾರಿ ಸೌಂದರ್ಯವರ್ಧಕವನ್ನು ಬಿಡಿ ಪಪ್ಪಾಯಿ ಹಣ್ಣನ್ನು ಬಳಸಿ

ದುಭಾರಿ ಸೌಂದರ್ಯವರ್ಧಕವನ್ನು ಬಿಡಿ ಪಪ್ಪಾಯಿ ಹಣ್ಣನ್ನು ಬಳಸಿ

ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ, ಫೈಬರ್ ಅಂಶ, ಪೊಟ್ಯಾಸಿಯಮ್ ಮತ್ತು ಇತರ ಖನಿಜಗಳು, ಆಂಟಿ-ಆಕ್ಸಿಡೆಂಟ್‌ಗಳು, ಕೆಲವು ಕಿಣ್ವಗಳು ಇತ್ಯಾದಿ ಸಮೃದ್ಧವಾಗಿದೆ. ಕೇವಲ ಆರೋಗ್ಯ ಪ್ರಯೋಜನಗಳಲ್ಲ ಈ ಹಣ್ಣುನ್ನು ಕಾಸ್ಮೆಟಿಕ್ ಉದ್ಯಮದಲ್ಲಿ ಲಿಪ್ ಬಾಮ್ ನಿಂದ ಶ್ಯಾಂಪೂಗಳವರೆಗೆ ಸಾಕಷ್ಟು ಉತ್ಪನ್ನಗಳಲ್ಲಿ ಉಪಯೋಗಿಸಲಾಗುತ್ತಿದೆ, ಪಪ್ಪಾಯಿ ಸಾರಗಳೊಂದಿಗೆ ನೀವು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳನ್ನು ಕಾಣಬಹುದು. ಇದನ್ನು ಸೌಂದರ್ಯ ವರ್ಧಕವಾಗಿ ಹೇಗೆ ಉಪಯೋಗಿಸಿಕೊಳ್ಳಬಹುದು ಎಂದು ನೋಡೋಣ ಬನ್ನಿ.

  • ಪಪ್ಪಾಯಿ ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಪಪೈನ್ ನಂತಹ ಕಿಣ್ವಗಳನ್ನು ಹೊಂದಿರುವುದರಿಂದ, ಸತ್ತ ಚರ್ಮವನ್ನು ತೆಗೆದು ಹಾಕುವಲ್ಲಿ ಸಹಕಾರಿಯಾಗಿದೆ.
     


 

  • ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಸುಕ್ಕುಗಳು ಮತ್ತು ಪೂರ್ವ ಪ್ರಬುದ್ಧ ವಯಸ್ಸನ್ನು ತಡೆಯುತ್ತದೆ, ಆದ್ದರಿಂದ ನೀವು ಯೌವ್ವನದವರಂತೆ ಕಾಣುವಿರಿ.
  • ಕಚ್ಚಾ ಪಪ್ಪಾಯಿಯನ್ನು ಮುಖದ ಮೇಲೆ ಹಚ್ಚಿದಾಗ ಗುಳ್ಳೆಗಳನ್ನು, ಕಲೆಗಳನ್ನು ತೋಡುದುಹಾಕುತ್ತದೆ.
     


 

  • ಒಣ ಚರ್ಮ ಹೊಂದಿರುವ ಜನರಿಗೆ ಮಾಗಿದ ಪಪ್ಪಾಯಿ ಮತ್ತು ಹಾಲಿನ ಕೆನೆಯಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ತ್ವಚೆಯಲ್ಲಿ ತೇವಾಂಶ ಮತ್ತೆ ಮರಳಿ ಬರುತ್ತದೆ.
     


 

  • ಇದು ನಮ್ಮ ಚರ್ಮವನ್ನು ನೇರಳಾತೀತ ವಿಕಿರಣದಿಂದ ರಕ್ಷಿಸುತ್ತದೆ. ಮೂಲತಃ ಇದು ನೈಸರ್ಗಿಕ ಸನ್‌ಸ್ಕ್ರೀನ್‌ನಂತೆ ಕಾರ್ಯನಿರ್ವಹಿಸುತ್ತದೆ.
  • ಇದು ಚರ್ಮದ ಟೋನ್ ಅನ್ನು ಹಗುರಗೊಳಿಸುತ್ತದೆ.

ಇದನ್ನೂ ಓದಿ: ಹಲಸಿನ ಹಣ್ಣಿನ ಮಹತ್ವ ನೋಡಿ ತಿಳಿಯಿರಿ

ಇದನ್ನೂ ಓದಿ: ನೀವು ಥೈರಾಯಿಡ್ ಸಮಸ್ಯೆ ಇಂದ ಬಳಲುತ್ತಿದ್ದೀರಾ ಹಾಗಾದರೆ ಇಲ್ಲಿದೆ ನೋಡಿ ಮನೆಮದ್ದು