ಒಂದು ದೇಶ, ಒಂದು ಕಾರ್ಡ್: ಅಮಿತ್ ಶಾ
ಎಷ್ಟು ಕಾರ್ಡ್ ಅಂತ ನಾವು ಪಾಕೆಟ್ ನಲ್ಲಿ ಇಟ್ಕೋಬೇಕು? ಆದರೆ ಈ ಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ ಇನ್ನಿತರೆ ಎಲ್ಲ ಕಾರ್ಡ್ ಗಳನ್ನ ಒಂದೇ ಕಾರ್ಡ್‌ನ್ನಾಗಿ ಪರಿವರ್ತಿಸುವ ಬಗ್ಗೆ ಅಮಿತ್ ಶಾ ಅವರು ಪ್ರಸ್ತಾಪ ಮಾಡಿದ್ದಾರೆ.
ಈ ಒಂದು ಕಾರ್ಡ್ ನಲ್ಲಿ ಎಲ್ಲ ಮಾಹಿತಿಯನ್ನು ಒಳಗೊಂಡಿರುತ್ತದೆ ಹಾಗು ಇದು ಗುಣಮಟ್ಟದ ಕಾರ್ಡ್ ಆಗಿದ್ದು ಬಳಸಲು ಸುಲಭವಾಗಿರುತ್ತದೆ ಎಂದು ಹೇಳಿದರು. ೨೦೨೧ರಲ್ಲಿ ಜನಗಣತಿಯು ನಡೆಯಲಿದ್ದು ಈ ಭಾರಿ ಪೇಪರ್ ಬದಲು ಮೊಬೈಲ್ ಆಪ್ ಬಳಸಿ ಜನಗಣತಿ ಮಾಡಲಾಗುವುದು ಎಂದು ಹೇಳಿದರು.
ಈ ಬಾರಿಯ ಜನಗಣತಿಯಲ್ಲಿ ತಂತ್ರಜ್ಞಾನವೇ ಪ್ರಮುಖ ಅಂಶವಾಗಿರಲಿದ್ದು. ವ್ಯಕ್ತಿ ಸತ್ತ ಮಾಹಿತಿಯನ್ನೂ ಅಪ್‌ಡೇಟ್ ಮಾಡುವ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದರು.