ಕಾವೇರಿ ಕೂಗು: ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ದೂರು
ವಕೀಲ ಎ ವಿ ರಾಮನಾಥನ್ ಅವರು ಕಾವೇರಿ ಕೂಗು ಅಭಿಯಾನದಡಿಯಲ್ಲಿ ಗಿಡಗಳನ್ನು ನೆಡಲು ಸಂಗ್ರಹಿಸುತ್ತಿರುವ 42 ರೂ ಸದ್ಗುರು ಅವರ ಈಶ ಫೌಂಡೇಶನ್ ವಿರುದ್ಧ ಕರ್ನಾಟಕ ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಈ ಸಂಬಂಧ ಹೈಕೋರ್ಟ್ ನೋಟಿಸ್ ಕೂಡ ಜಾರಿ ಮಾಡಿದೆ. ಜತೆಗೆ ಅರ್ಜಿಗೆ ಆಕ್ಷೇಪಣೆಯಿದ್ದರೆ ಮೂರು ವಾರಗಳಲ್ಲಿ ಸಲ್ಲಿಸುವಂತೆ ಸರ್ಕಾರ ಹಾಗೂ ಈಶ ಫೌಂಡೇಷನ್‌ಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿ ಸೂಚಿಸಿದೆ.
ಯಡಿಯೂರಪ್ಪ ರವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಸರ್ಕಾರವು 'ಕಾವೇರಿ ಕೂಗು' ಅಭಿಯಾನಕ್ಕೆ ಎರಡು ಕೋಟಿ ಗಿಡಗಳನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದರು, ಈ ಕಾರ್ಯಕ್ರಮದಲ್ಲಿ ಸದ್ಗುರು ಕೂಡ ಭಾಗವಯಿಸಿದ್ದರು. ಸರ್ಕಾರದ ಈ ನಡೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಈಶ ಪ್ರತಿಷ್ಠಾನ ಕಾವೇರಿ ಜಲಾನಯನ ಪ್ರದೇಶದಲ್ಲಿ ತಾನು ಅಧ್ಯಯನ ನಡೆಸಿರುವುದಾಗಿ ಹೇಳಿಕೊಂಡಿದೆ. ಆದರೆ ಈ ಅಧ್ಯಯನದ ವರದಿಗಳನ್ನು ಕರ್ನಾಟಕ ಸರ್ಕಾರ ಪರಿಶೀಲಿಸಿದೆಯೆ? ಪರಿಶೀಲಿಸಿದ ಬಳಿಕವೇ ಸಸಿಗಳನ್ನು ದೇಣಿಗೆ ನೀಡಲು ಅನುಮತಿ ನೀಡಿದೆಯೇ? ಎಂದು ಪ್ರಶ್ನಿಸಿದ್ದಾರೆ.
'ಸರ್ಕಾರವು ಇಂತಹ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಬೇಕು, ಅದರ ಸಾಧಕ ಬಾದಕಗಳ ಕುರಿತು ಸಮಾಲೋಚನೆ ಮಾಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
ಈಶ ಪ್ರತಿಷ್ಠಾನವು ಕಾವೇರಿ ನದಿಯನ್ನು ಉಳಿಸಲು 253 ಕೋಟಿ ಮರಗಳನ್ನು ನೆಡಲು ಉದ್ದೇಶಿಸಿದೆ. ಒಂದು ಗಿಡ ನೆಡಲು ಈಶ ಪ್ರತಿಷ್ಠಾನವು ಸಾರ್ವಜನಿಕರಿಂದ 42 ರೂನಂತೆ ಹಣ ಸಂಗ್ರಹಿಸುತ್ತಿದೆ. ಇದರ ಅರ್ಥ ಈಶ ಪ್ರತಿಷ್ಠಾನವು ಸುಮಾರು 10,626 ಕೋಟಿ ರೂ ಸಂಗ್ರಹಿಸುತ್ತಿದೆ. ಈ ರೀತಿ ಸಾರ್ವಜನಿಕರ ಹಣವನ್ನು ಸಂಗ್ರಹಿಸುವುದು ತುಂಬಾ ಗೊಂದಲಕಾರಿಯಾಗಿದೆ' ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಈ ಯೋಜನೆಯ ಉದ್ದೇಶ ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿಯ ಹುಟ್ಟೂರಾದ ತಲಕಾವೇರಿಯಿಂದ ತಿರುವರೂರುವರೆಗಿನ 639.1 ಕಿ.ಮೀ. ವ್ಯಾಪ್ತಿಯಲ್ಲಿ ಮರಗಳನ್ನು ನೆಡುವುದು. ಅದಕ್ಕಾಗಿ ಸೆ. 3ರಂದು ಬೈಕ್ ರಾಲಿಗೆ ಚಾಲನೆ ನೀಡಲಾಗಿತ್ತು.