ನೀವು ಕಡಿಮೆ ವಯಸ್ಸಿನವರಾಗಿ ಕಾಣಬೇಕೇ? ಹಾಗಾದರೆ ಇದನ್ನೊಮ್ಮೆ ನೋಡಿ

ನೀವು ಕಡಿಮೆ ವಯಸ್ಸಿನವರಾಗಿ ಕಾಣಬೇಕೇ? ಹಾಗಾದರೆ ಇದನ್ನೊಮ್ಮೆ ನೋಡಿ

ನಮ್ಮ ದೇಹದ ಉಳಿದ ಭಾಗಗಳಂತೆಯೇ,ನಮ್ಮ ಚರ್ಮದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಕೆಲವು ಅಗತ್ಯ ಪೋಷಕಾಂಶಗಳ ಅಗತ್ಯವಿರುತ್ತದೆ. ಹಾರ್ಮೋನುಗಳ ಏರಿಳಿತ, ಕೆಲವು ಅಗತ್ಯ ಆಹಾರಗಳ ಕೊರತೆ ಇತ್ಯಾದಿ ಚರ್ಮದ ಮೇಲೆ ಹಾನಿ ಉಂಟುಮಾಡಬಹುದು. ಆದ್ದರಿಂದ ಚರ್ಮವು ಉತ್ತಮವಾಗಿ ಕಾಣಲು ನೀವು ದುಬಾರಿ ಸೌಂದರ್ಯವರ್ಧಕಗಳನ್ನು ಖರೀದಿಸಲು ಸಾವಿರಾರು ಹಣವನ್ನು ಖರ್ಚು ಮಾಡುತ್ತಿರುವಾಗ, ನಿಮ್ಮ ಚರ್ಮಕ್ಕೂ ಆರೋಗ್ಯಕರ ಆಹಾರವನ್ನು ಒದಗಿಸುವತ್ತ ನೀವು ಸ್ವಲ್ಪ ಸಮಯವನ್ನು ಕಳೆಯುವುದರಿಂದ ಪ್ರಯೋಜನ ಪಡೆಯಬಹುದು.

ಚರ್ಮದ ಆರೋಗ್ಯವನ್ನು ಕಾಪಾಡಲು ತಿಳಿದಿರುವ ಕೆಲವು ಪೋಷಕಾಂಶಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು, ಒಮೆಗಾ -3 ಮತ್ತು -6 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಮತ್ತು ಸಿ ಪ್ರಮುಖವಾಗಿವೆ. ಆಂಟಿಆಕ್ಸಿಡೆಂಟ್‌ಗಳು ಹಣ್ಣು ಮತ್ತು ತರಕಾರಿಗಳಂತಹ ಸಸ್ಯ ಆಧಾರಿತ ಆಹಾರಗಳಲ್ಲಿ ಜೊತೆಗೆ ಮಸಾಲೆ ಮತ್ತು ಗಿಡಮೂಲಿಕೆಗಳಲ್ಲಿ ಕಂಡುಬರುತ್ತವೆ. ಇವು ಸಾಮಾನ್ಯವಾಗಿ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಜೀವಸತ್ವಗಳನ್ನು ಹೊಂದಿವೆ.

ಆಂಟಿಆಕ್ಸಿಡೆಂಟ್‌ಗಳು ಉರಿಯೂತದ ವಿರುದ್ಧ ಹೋರಾಡುತ್ತವೆ, ಇದು ಹೊರಭಾಗದಲ್ಲಿ ಆಗುವ ಕಲೆಗಳು ಹಾಗು ಮೊಡವೆಗಳ ವಿರುದ್ಧ ಹೋರಾಡುತ್ತದೆ. ಕೊಬ್ಬಿನಾಮ್ಲಗಳು ಮೀನುಗಳು, ಬಾದಾಮಿ ಮತ್ತು ಧಾನ್ಯಗಳಲ್ಲಿ ಕಂಡುಬರುತ್ತವೆ. ಈ ಎಲ್ಲ ಪೋಷಕಾಂಶಗಳು ಒಂದೇ  ಪಾನೀಯದಲ್ಲಿ ಸಿಕ್ಕರೆ ಒಳ್ಳೆಯದು ಅಲ್ಲವೇ. ಬನ್ನಿ ಅದನ್ನು ಹೇಗೆ ಮಾಡುವುದೆಂದು ನೋಡೋಣ.

ಈ ಪಾಕವಿಧಾನದಲ್ಲಿ ಬಾಳೆಹಣ್ಣು, ಅನಾನಸ್, ಅಗಸೆಬೀಜ, ತೆಂಗಿನ ಹಾಲು, ತೆಂಗಿನ ಎಣ್ಣೆ, ಶುಂಠಿ, ದಾಲ್ಚಿನ್ನಿ ಮತ್ತು ಅರಿಶಿನವಿದೆ. ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ ಈ ಪಾನೀಯವು ನಿಮ್ಮ ಆಹಾರಕ್ರಮಕ್ಕೆ ಪ್ರಬಲ ಸೇರ್ಪಡೆಯಾಗಬಹುದು. ತೆಂಗಿನ ಎಣ್ಣೆ ಮತ್ತು ಹಾಲು ಆರೋಗ್ಯಕರ ಕೊಬ್ಬುಗಳು ಮತ್ತು ಪ್ರಮುಖ ಜೀವಸತ್ವಗಳ ಮೂಲಗಳಾಗಿವೆ, ಮತ್ತು ಅಗಸೆಬೀಜಗಳು ನಿಮಗೆ ಒಮೆಗಾ ಕೊಬ್ಬಿನಾಮ್ಲಗಳ ಪ್ರಮಾಣವನ್ನು ಒದಗಿಸುತ್ತದೆ. ಶುಂಠಿ ಮತ್ತು ಅರಿಶಿನ ಎರಡೂ ಮಸಾಲೆಗಳಾಗಿದ್ದು, ಇದು ಚರ್ಮದ ಆರೋಗ್ಯವನ್ನು ಸುಧಾರಿಸುವ ಮೂಲಕ ಮತ್ತು ಉರಿಯೂತದ ವಿರುದ್ಧ ಹೋರಾಡುವ ಮೂಲಕ ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಗಟ್ಟುತ್ತವೆ. 

ಈ ಪಾನೀಯವನ್ನು ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ:

1. ಬಾಳೆಹಣ್ಣು ಮತ್ತು ಅನಾನಸ್ ಕತ್ತರಿಸಿ.

2. ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಅಗಸೆಬೀಜ, ತುರಿದ ಶುಂಠಿ, ತೆಂಗಿನ ಎಣ್ಣೆ, ದಾಲ್ಚಿನ್ನಿ ಪುಡಿ, ಅರಿಶಿನ ಪುಡಿ ಮತ್ತು ಅಗಸೆಬೀಜವನ್ನು ಹಣ್ಣುಗಳಿಗೆ ಸೇರಿಸಿ.

3. ತೆಂಗಿನ ಹಾಲು ಸೇರಿಸಿ ಮತ್ತು ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ.

4. ನೀವು ಬಯಸಿದರೆ ಪಾನೀಯವನ್ನು ಹೆಚ್ಚು ಸಿಹಿಗೊಳಿಸಲು ನೀವು ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು.

ಇದನ್ನು ಕುಡಿಯುವುದರಿಂದ ಚರ್ಮವು ಕಾಂತಿಯುಕ್ತವಾಗಿ ಕಾಣುವುದಲ್ಲದೆ ವಯಸ್ಸಾಗುವುದನ್ನು ತಡೆಗಟ್ಟಬಹುದು  

ಇದನ್ನೂ ಓದಿ: ಫಳ ಫಳ ಹೊಳೆಯುವ ಮುಖಕ್ಕಾಗಿ ಮನೆಯಲ್ಲೇ ಅಲೋವೆರಾ ಫೇಷಿಯಲ್

ಇದನ್ನೂ ಓದಿ: ಚರ್ಮದ ಸಮಸ್ಯೆಗೆ ಮನೆಮದ್ದು ಈ ಅರಿಶಿನ ಪುಡಿ