ಹೊರರಾಜ್ಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತನ್ನಿ: ಕಾಂಗ್ರೆಸ್

ಹೊರರಾಜ್ಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತನ್ನಿ: ಕಾಂಗ್ರೆಸ್

ಲಾಕ್‌ಡೌನ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆ ತರುವಂತೆ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ವಿವಿಧ ರಾಜ್ಯಗಳಲ್ಲಿ ಅಂದಾಜು ಬರೋಬ್ಬರಿ 70 ಸಾವಿರ ಮಂದಿ ಕನ್ನಡಿಗರು ನೆಲೆಸಿದ್ದಾರೆ.

ಇಷ್ಟು ಜನರನ್ನೂ ಕರೆತಂದು  ತಪಾಸಣೆಗೊಳಪಡಿಸಿ  ಕ್ವಾರಂಟೈನ್ ಮಾಡುವುದು ಸುಲಭದ ಕೆಲಸವಲ್ಲ.  ಉಡುಪಿಯ ಸುಮಾರು 30 ಸಾವಿರ ಮಂದಿ ಮಹಾರಾಷ್ಟ್ರದಲ್ಲಿ ಇದ್ದಾರೆ.

ಒಟ್ಟಾರೆ ಈ ವಿಚಾರದಲ್ಲಿ ಈಗ ಅಧಿಕಾರಿಗಳಿಗೆ ಗೊಂದಲ ಶುರುವಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಮುಖ್ಯ ಕಾರ್ಯದರ್ಶಿ ಚರ್ಚೆ ನಡೆಸಿದ್ದಾರೆ.