ಗೌರಿ ಗಣೇಶ ಹಬ್ಬ ಆಚರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಕೆ ಮಾಡಲಾಯಿತು. ನಂತರ ಹಿರಿಯ ಪುತ್ರ ವಿಜಯೇಂದ್ರ ನಿವಾಸಕ್ಕೆ ತೆರಳಿದ ಸಿಎಂ, ಗೌರಿ ಗಣೇಶ ಹಬ್ಬದಲ್ಲಿ ಭಾಗಿಯಾದರು. ಮಕ್ಕಳು, ಮೊಮ್ಮಕ್ಕಳ ಜೊತೆಗೆ ಗೌರಿ ಗಣೇಶ ಹಬ್ಬ ಆಚರಿಸಿದರು.
ಕಳೆದ ಎರಡು ತಿಂಗಳಿನಿಂದ ವಿಜಯೇಂದ್ರ, ರಾಘವೇಂದ್ರ ಹೊರತುಪಡಿಸಿ ಮಕ್ಕಳು, ಮೊಮ್ಮಕ್ಕಳನ್ನ ಭೇಟಿಯಾಗಿರಲಿಲ್ಲ. ಅಧಿಕಾರ ವಹಿಸಿಕೊಂಡ ನಂತರವೂ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸುವುದರಲ್ಲೇ ಬ್ಯುಸಿ ಇದ್ದ ಸಿಎಂ ನಂತರ ಸಂಪುಟ ವಿಸ್ತರಣೆಯ ಗದ್ದಲದಲ್ಲಿ ತಲ್ಲೀನರಾಗಿದ್ದರು. ಬಹುದಿನಗಳ ನಂತರ ಮೊಮ್ಮಕ್ಕಳ ಜೊತೆಗೆ ಸಿಎಂ ಕಾಲ ಕಳೆದಿದ್ದಾರೆ.
ಈ ಸುದ್ದಿಯು ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಸಲಹೆಗಳನ್ನು ಕಾಮೆಂಟ್ಗಳಲ್ಲಿ ಕಳುಹಿಸಿ. ಹೆಚ್ಚಿನ ಸುದ್ದಿಗಳಿಗಾಗಿ ..! Chotanews.in ಅನ್ನು ನೋಡುತ್ತಿರಿ.