ಸೆಪ್ಟೆಂಬರ್ 22 ರಂದು ಅನಂತಕುಮಾರ್ ಪ್ರತಿಷ್ಠಾನ ನಡೆಯಲಿದೆ
ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜಕಾರ್ಯಕ್ಕೆ ಧುಮುಕಿದ ಅನಂತಕುಮಾರ್ ನಾಲ್ಕು ದಶಕಗಳಷ್ಟು ಕಾಲ ಸಮಾಜಕೀಯವಾಗಿ ಹಾಗು ರಾಜಕೀಯಯದಲ್ಲಿ ದುಡಿದವರು. ಅವರಿಗೆ ಯಾವುದೇ ಅಧಿಕಾರ ಸಿಕ್ಕರು ಅದನ್ನು ದೇಶ ಸೇವೆ ಮತ್ತು ಸಮಾಜಸೇವೆ ಮಾಡಲು ಸಿಕ್ಕ ಅವಕಾಶವೆಂದು ತಿಳಿದು ಕೆಲಸ ಮಾಡಿದವರು. ಅವರ ಆಶಯದಂತೆ ಟ್ರಸ್ಟ್ ಕೆಲಸ ಮಾಡಲಿದೆ ಎಂದು ಅನಂತಕುಮಾರ್ ಪತ್ನಿ ತೇಜಸ್ವಿನಿ ಹೇಳಿದರು.
ಅನಂತಕುಮಾರ್ ಹೆಸರಿನಲ್ಲಿ ಟ್ರಸ್ಟ್ ವೊಂದನ್ನು ಸ್ಥಾಪಿಸಲು ನಿರ್ಣಯಿಸಲಾಗಿದ್ದು ಮಾಜಿ ವಿಧಾನ ಪರಿಷತ್ ಸದಸ್ಯರೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆದ ಪ್ರೊ. ಪಿ.ವಿ.ಕೃಷ್ಣಭಟ್ ಅವರ ನೇತೃತ್ವದಲ್ಲಿ ಅದರ ಉದ್ಘಾಟನೆಯು ಅವರ ಹುಟ್ಟುಹಬ್ಬ ಸೆಪ್ಟೆಂಬರ್ 22 ರ ಭಾನುವಾರದಂದು ನೆರವೇರಲಿದೆ.
ಅನಂತಕುಮಾರ್ ರವರು ಪ್ರತಿವರ್ಷ ತಮ್ಮ ಹುಟ್ಟುಹಬ್ಬದಂದು ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು ಅವರು ದಶಕಗಳಿಂದ ನಡೆಸಿಕೊಂಡು ಬಂದಿರುವ ಪದ್ಧತಿ. ಈ ವರ್ಷವೂ ಅನಂತಕುಮಾರ್ ಅವರ ಹುಟ್ಟುಹಬ್ಬದಂದು ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಬೇಕೆಂದು ನಿರ್ಧರಿಸಲಾಗಿದೆ.
ಸೆಪ್ಟೆಂಬರ್ 22 ರ ಭಾನುವಾರ ಬೆಂಗಳೂರಿನ ಜಯನಗರದ ಎನ್‍ಎಂಕೆಆರ್ ವಿ ಕಾಲೇಜಿನ ಮಂಗಳ ಸಭಾಮಂಟಪದಲ್ಲಿ ಮದ್ಯಾಹ್ನ ೩ ಗಂಟೆಗೆ ಪ್ರತಿಭಾ ಪುರಸ್ಕಾರ ಮತ್ತು ಸಂಜೆ ೫ ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.