ರವಿ ಡಿ ಚೆನ್ನಣ್ಣವರ್ ರವರ ಈ ಕಾರ್ಯಕ್ಕೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ
ವಾಹನ ಕಾಯಿದೆ ತಿದ್ದುಪಡಿ ಬಂದ ನಂತರ ಪೋಲಿಸರು ವಾಹನ ಸವಾರರಿಗೆ ಹೆಚ್ಚು ಹೆಚ್ಚು ದಂಡವನ್ನು ಹಾಕುತ್ತಿದ್ದಾರೆ . ಎಲ್ಲರೂ ಪೊಲೀಸರಿಗೆ ಹಿಡಿ ಶಾಪಹಾಕುತಿದ್ದರೆ ಇಲ್ಲಿ ಮಾತ್ರ ಈ ಪೊಲೀಸ್ ಮಾಡುತ್ತಿರುವ ಕಾರ್ಯವನ್ನು ನೋಡಿ ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಅವರು ಯಾರು ಏನು ಕೆಲಸ ಮಾಡಿದರು ಅಂತ ತಿಳ್ಕೊಬೇಕಾ ?
ಅವರೇ ನಮ್ಮ ಸಿಂಗಂ ಖ್ಯಾತಿಯ ರವಿ ಡಿ ಚನ್ನಣ್ಣನವರು. DL ಇಲ್ಲದವರಿಗೆ DL ಮಾಡಿಸುವ ಅಭಿಯಾನವನ್ನು ಶುರು ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ SP ಯಾಗಿರುವ ರವಿ ಡಿ ಚನ್ನಣ್ಣನವರು ತಮ್ಮ ವ್ಯಾಪ್ತಿಗೆ ಬರುವಂತಹ ಎಲ್ಲ ತಾಲೂಕುಗಳಲ್ಲೂ ಈ ಅಭಿಯಾನ ನಡೆಯಲಿದೆ ಎಂದು ಹೇಳಿದ್ದಾರೆ. RTO ಅಧಿಕಾರಿಗಳಿಗೆ ಈ ಬಗ್ಗೆ ಪತ್ರಬರೆದಿದ್ದು DL ಅಭಿಯಾನವನ್ನು ಸೆಪ್ಟೆಂಬರ್ ೧೫ರ ಬಳಿಕ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗುವುದೆಂದು ಅದಕ್ಕೆ ಹೆಚ್ಚುವರಿ ಹಣ ನೀಡದೆ ಸೂಕ್ತ ದಾಖಲೆ ನೀಡಿ DL ಪಡೆಯಬಹುದಾಗಿದೆ.