ಮದ್ಯ ಪ್ರಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ

ಮದ್ಯ ಪ್ರಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ

ಅಂತೂ ಇಂತೂ ಲಾಕ್ ಡೌನ್ ಸಡಿಲಿಸಿ ಎಣ್ಣೆ ಮಾರಾಟಕ್ಕೆ ಅನುವು ಮಾಡಿಕೊಟ್ಟಿದ್ದ ಸರ್ಕಾರ ಒಂದು ಬಿಗ್ ಶಾಕ್ ನೀಡುವ ಮೂಲಕ ನಶೆಯ  ಅಮಲನ್ನು ಇಳಿಸಲು ಮುಂದಾಗಿದೆ. 

ಅಬಕಾರಿ ಸುಂಕವನ್ನು ಹೆಚ್ಚಿಸಲು ಮುಂದಾಗಿದ್ದು ಆಂಧ್ರ, ದೆಹಲಿ, ಪಶ್ಚಿಮ ಬಂಗಾಳ ಮಾದರಿಯನ್ನು ಅನುಸರಿಸುತ್ತಿದೆ. ಈ ಮೊದಲು ದೆಹಲಿಯಲ್ಲಿ 70%, ಆಂದ್ರದಲ್ಲಿ 50% ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಅಬಕಾರಿ ಸುಂಕ 11% ಹೆಚ್ಚಿಸಲು ಸರ್ಕಾರ ಮುಂದಾಗಿದೆ.

ಈ ಮೊದಲು ರಾಜ್ಯ ಸರ್ಕಾರ ಏಪ್ರಿಲ್ 01 ರಿಂದ ಜಾರಿಯಾಗುವಂತೆ 6% ಅಬಕಾರಿ ಸುಂಕ ಹೆಚ್ಚಿಸಿತ್ತು. ಇದೀಗ ಮತ್ತೆ 11% ಅಬಕಾರಿ ಸುಂಕವನ್ನು ಹಿಚ್ಚಿಸುತ್ತಿದೆ.