12 ರೀತಿಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ?

12 ರೀತಿಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ?
ಪ್ಲಾಸ್ಟಿಕ್ ವಸ್ತು

ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರವು 12 ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಮುಂದಾಗಿದೆ. ಒಮ್ಮೆ ಉಪಯೋಗಿಸುವಂತಹ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಸಿಗರೇಟ್ ಬಡ್ಸ್  ಸೇರಿದಂತೆ ಕೆಲವು ಪ್ಲಾಸ್ಟಿಕ್ ಗಳನ್ನು ನಿಷೇಧಿಸಲು ಮುಂದಾಗಿದೆ. ಪ್ರಧಾನಿ ಮೋದಿ ಯವರು ಸ್ವತಂತ್ರ ದಿನಾಚರಣೆಯ ಭಾಷಣದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಹೇಳಿದ್ದರು ಈಗ ಅದನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಈ ಕುರಿತಂತೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿದ್ದು, ಅದರಲ್ಲಿ 12 ರೀತಿಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ಮತ್ತು ಬಳಕೆ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಲು ಮುಂದಾಗಿದೆ. 
ತಮ್ಮ ಈ ನಿರ್ಧಾರದಿಂದ ಪ್ಲಾಸ್ಟಿಕ್ ಕಂಪನಿಗಳಿಗೆ ಆಕ್ಷೇಪಣೆಗಳಿದ್ದರೆ ಕೂಡಲೇ ಮನವಿಯನ್ನು ಸಲ್ಲಿಸುವಂತೆ ಸೂಚನೆ ನೀಡಲು ತಿಳಿಸಲು ಕೇಂದ್ರ ಸರ್ಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ  ತಿಳಿಸಿದೆ. 

ಈ ವಸ್ತುಗಳು ನಿಷೇಧವಾಗಬಹುದು 

  • ಹ್ಯಾಂಡ್ ಕವರ್ (50 ಮೈಕ್ರಾನ್ ಗಿಂತ ಕಡಿಮೆಯದ್ದು)
  • ಸ್ಟ್ರಾಗಳು 
  • ಪ್ಲಾಸ್ಟಿಕ್ ಕಪ್ ಗಳು
  • ಪ್ಲಾಸ್ಟಿಕ್ ಬಾಟಲಿ 
  • ಬೇಕರಿ ತಿನಿಸುಗಳಿಗೆ ಹಾಕುವ ಸಣ್ಣ ಪ್ಲಾಸ್ಟಿಕ್ ಕಪ್ ಗಳು(150 ಮಿಲಿ ಮತ್ತು ೫ ಗ್ರಾಂ ಕ್ಕಿಂತ ಕಡಿಮೆ)
  • ಆಕಾಶಬುಟ್ಟಿಗಳು 
  • ಪ್ಲಾಸ್ಟಿಕ್ ಧ್ವಜಗಳು 
  • ಸಿಗರೇಟ್ ಬಡ್ಸ್ 
  • ಜ್ಯೂಸು ಗಳಿಗೆ ಬಳಸುವ ಪ್ಲಾಸ್ಟಿಕ್ ಗ್ಲಾಸ್ ಗಳು (200 ಮಿಳಿಗಿಂತ ಕಡಿಮೆ )
  • ರಸ್ತೆಬದಿಯ ಬ್ಯಾನರ್ ಗಳು 
  • ಮಿಠಾಯಿಗಳಿಗೆ ಹಾಕುವ ಟ್ರಾನ್ಸ್ಪರೆಂಟ್/ಪಾರದರ್ಶಕ ಪ್ಲಾಸ್ಟಿಕ್ ಕವರ್ ಗಳು 
  • ನಾನ್ ಓವೆನ್ ಪ್ಲಾಸ್ಟಿಕ್ ಬ್ಯಾಗ್ ಗಳು