ಇ ಪಿ ಎಫ್ ಖಾತೆದಾರರಿಗೆ ಇಲ್ಲೊಂದು ಮಾಹಿತಿ
ನೀವು ಉದ್ಯೋಗಿಯಾಗಿದ್ದು ನಿಮ್ಮ ಸಂಬಳದಲ್ಲಿ ಇ ಪಿ ಎಫ್ ಕಡಿತವಾಗುತ್ತಿದ್ದರೆ ಅಂತಹ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ.
ಇ ಪಿ ಎಫ್ ಒ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಉದ್ಯೋಗಿಯು ತನ್ನ ನಾಮಿನಿಯ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮನೆಯಲ್ಲೇ ಕುಳಿತು ಇಂಟರ್ನೆಟ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಯಾರು ನೋಂದಾಯಿಸಿಕೊಂಡಿರುವುದಿಲ್ಲವೋ ಆ ಉದ್ಯೋಗಿಯ ಪೋರ್ಟಲ್ ತೆರೆಯುತ್ತಿದ್ದಂತೆ ಪಾಪ್ ಅಪ್ ಕಾಣಿಸಲಿದೆ. ಅಲ್ಲಿ ಕ್ಲಿಕ್ ಮಾಡಿ ಭರ್ತಿ ಮಾಡಬೇಕಾಗುತ್ತದೆ.
ಇ ಪಿ ಎಫ್ ಒ ನಿಯಮಗಳ ಪ್ರಕಾರ ಕುಟುಂಬದ ಸದಸ್ಯರನ್ನೇ ನಾಮಿನಿಯನ್ನಾಗಿ ಮಾಡಬೇಕಾಗುತ್ತದೆ.