ಬೇಸಿಗೆಯಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಬೇಸಿಗೆಯಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆಯ ಬಿಸಿಲು ನಾನಾ  ಅನಾರೋಗ್ಯಗಳನ್ನು ಉಂಟು ಮಾಡುತ್ತದೆ. ಮೊದಲು ಹಾನಿಗೊಳಗುವುದು ನಮ್ಮ ಚರ್ಮ. ಬಿಸಿಲಿನ ಬೇಗೆಗೆ ಚರ್ಮದಲ್ಲಿನ ರಂದ್ರಗಳು ಕೈ ಕಾಲುಗಳು ಸುಟ್ಟಂತಾಗುವುದು, ಕಣ್ಣುಗಳ ಉರಿ ಉಂಟಾಗುವುದು, ಚರ್ಮವು ಕಾಂತಿಹೀನವಾಗುವುದು ಹೀಗೆ ನಾನಾ ಸಮಸ್ಯೆಗಳನ್ನು ಅನುಭವಿಸುತ್ತೆ. ಇಲ್ಲಿ  ನಿಮಗೆ ಈ ಸಮಸ್ಯೆಗಳಿಂದ ಪಾರಾಗುವುದು ಹೇಗೆಂದು ತಿಳಿಸಲಾಗಿದೆ. 

ಮೊದಲಿಗೆ ಆಹಾರ ಕ್ರಮದಲ್ಲಿ ಕರಿದ ತಿಂಡಿಗಳು, ಪಿಷ್ಟ ಆಹಾರ, ಆಲ್ಕೋಹಾಲ್ ಗಳನ್ನ ದೂರವಿಡಿ. ಅತಿ ಹೆಚ್ಚು ನೀವು ಮಜ್ಜಿಗೆ, ತೆಂಗಿನ ನೀರು, ಕಲ್ಲಂಗಡಿಹಣ್ಣು, ಸೈತೆಕಾಯಿ, ಪುದಿನ ಹಾಗು ಇತರೆ ನೀರಿನಾಂಶ ಇರುವ ಹಣ್ಣು ಮತ್ತು ತರಕಾರಿಗಳನ್ನು ಉಪಯೋಗಿಸಿ. 

ಕೈ ಮತ್ತು ಕಾಲುಗಳನ್ನು ಸುಡುವುದು:
ನಿಮ್ಮ ಕೈ ಮತ್ತು ಕಾಲುಗಳಲ್ಲಿ ಸುಡುವಿಕೆಯ ಅನುಭವಿದ್ದರೆ, ನಿಮ್ಮ ಕಾಲುಗಳು ಮತ್ತು ಅಂಗೈಗಳ ಮೇಲೆ ಸೋರೆಕಾಯಿ ಚೂರುಗಳನ್ನು ಉಜ್ಜಬೇಕು. ಆಗ ಉರಿ ಅನುಭವ ಕಡಿಮೆಯಾಗುತ್ತದೆ. 

ಕಣ್ಣುಗಳ ಉರಿ:
ಕಣ್ಣುಗಳಲ್ಲಿ ಉರಿ ಉಂಟಾದರೆ, ಬಳಸಿದ ಚಹಾ ಚೀಲಗಳನ್ನು ಫ್ರೀಜರ್‌ನಲ್ಲಿ ಇರಿಸಿ ಮತ್ತು ಅವುಗಳನ್ನು ಕೆಲವು ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇರಿಸಿ ಮತ್ತು ವಿಶ್ರಾಂತಿ ಪಡೆಯಿರಿ. ರೋಸ್ ವಾಟರ್ ಪ್ಯಾಡ್ ಮತ್ತು ಸೌತೆಕಾಯಿ ಚೂರುಗಳು ಸಹ ಹೆಚ್ಚು ಪರಿಣಾಮಕಾರಿ. ಹರಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದಲೂ ಕಣ್ಣುಗಳ ಉರಿ ಕಡಿಮೆಯಾಗುತ್ತದೆ. 

ಕಾಂತಿಯುತ ಚರ್ಮಕ್ಕಾಗಿ:
ಟೊಮೇಟೊ ತುಂಡನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಚರ್ಮವು ಕಾಂತಿಯುತವಾಗಿ ಕಂಗೊಳಿಸುತ್ತದೆ. ನೀವು ಕಲ್ಲಂಗಡಿ ಹಣ್ಣನ್ನು ಸಹ ಉಪಯೋಗಿಸಬಹುದು. 

ತೆರೆದ ರಂಧ್ರಗಳು:
ಬೇಸಿಗೆಯಲ್ಲಿ ತೆರೆದ ರಂಧ್ರಗಳು ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತವೆ. ಇದನ್ನು ತಡೆಗಟ್ಟಲು ಟೊಮೇಟೊ ತುಂಡುಗಳನ್ನು ತೆರೆದ ರಂಧ್ರಗಳ ಮೇಲೆ ನಿಧಾನವಾಗಿ ಉಜ್ಜಬೇಕು, ಅದು ನಿಮಗೆ ಬಿಗಿತದ ಅನುಭವವನ್ನು ನೀಡುತ್ತದೆ. ತೆರೆದ ರಂಧ್ರಗಳು ಶೀಘ್ರದಲ್ಲೇ ಕಡಿಮೆಯಾಗುವುದನ್ನು ನೀವು ಗಮನಿಸಬಹುದು. 

ಇವುಗಳ್ಳನ್ನು ತ್ಯಜಿಸಿ:

  1. ಸೋಡಾ ಪಾನೀಯಗಳು 
  2. ಸಕ್ಕರೆ ಬೇಡ, ತರಕಾರಿಗಳು ಮತ್ತು ಹಣ್ಣುಗಳಲ್ಲಿರುವ ನೈಸರ್ಗಿಕ ಸಕ್ಕರೆಯನ್ನು ಸೇವಿಸಿ.
  3. ಡ್ರೈ ಫ್ರುಟ್ಸ್‌ಗಳನ್ನು ಅತಿಯಾಗಿ ಸೇವಿಸದಿರಿ. ನಿಮ್ಮ ಹೃದಯಕ್ಕೆ ಇದು ಉತ್ತಮವಾದರೂ ದೇಹದ ಶಾಕವನ್ನು ಇವುಗಳು ಏರಿಸುತ್ತವೆ.
  4. ಸಮೋಸಾ ಚಿಪ್ಸ್ ಮೊದಲಾದ ಕೊಬ್ಬಿನ ಆಹಾರಗಳನ್ನು ಅತಿಯಾಗಿ ಸೇವಿಸದಿರಿ.