ಚಿರತೆಗೆ ಬಲಿಯಾದ 3 ವರ್ಷದ ಮಗು
ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ನಿನ್ನೆ ಶುಕ್ರವಾರ ಮಲಗಿದ್ದ ಮಗುವನ್ನು ಚಿರತೆಯೊಂದು ಹೊತೋಯ್ದು ತಿಂದು ಸಾಯಿಸಿದ ಘಟನೆ ನಡೆದಿದೆ. ಬೇಸಿಗೆ ಕಾಲವಾದ್ದರಿಂದ ಧಗೆಗೆ ಬಾಗಿಲನ್ನು ತೆರೆದಿಟ್ಟು ಮಲಗಿದ್ದರು, ಈ ಹೊತ್ತಿಗೆ ಚಿರತೆಯೊಂದು ಬಂದು ಮಲಗಿದ್ದ ೩ ವರ್ಷದ ಗಂಡು ಮಗುವನ್ನು ಹೊತ್ತೊಯ್ದು ದೂರದ ಅರಣ್ಯ ಪ್ರದೇಶದಲ್ಲಿ ಅರ್ಧ ತಿಂದು ಬಿಟ್ಟು ಹೋಗಿದೆ.
ವಿಷಯ ತಿಳಿದು ಅರಣ್ಯಾಧಿಕಾರಿಗಳು ಹಾಗು ಪೊಲೀಸರು ಅರಣ್ಯದಲ್ಲಿ ಪರಿಶೀಲಿಸಿದಾಗ ಮಗುವಿನ ಶವ ಸಿಕ್ಕಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.