ಆರೋಗ್ಯಕ್ಕೆ ತುಂಬಾ ಸಹಾಯಕಾರಿ ಈ ವೀಳ್ಯದೆಲೆ
ಭಾರತದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದ್ದು, ಪೂಜೆಗಳಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥೈಮೆನ್, ನಿಯಾಸಿನ್, ರಿಬೊಫ್ಲಾವಿನ್ ಮತ್ತು ಕ್ಯಾರೊಟೆನ್ ಹಾಗೂ ಕ್ಯಾಲ್ಸಿಯಂ ಅಧಿಕವಾಗಿದೆ. ಅದನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಆಗುವ ಲಾಭವೇನು ಎಂದು ತಿಳಿಯೋಣ ಬನ್ನಿ
ತೂಕ ಕಳೆದುಕೊಳ್ಳಲು
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ವೀಳ್ಯದೆಲೆಯು ತುಂಬಾ ಸಹಕಾರಿಯಾಗಿದೆ. ಇದು ದೇಹದಲ್ಲಿನ ಕೊಬ್ಬನ್ನು ಕರಗಿಸಿ, ಚಯಾಪಚಯ ಕ್ರಿಯೆ ಹೆಚ್ಚಿಸುವುದು.
ಬಾಯಿಯ ಕ್ಯಾನ್ಸರ್ ತಡೆಯುತ್ತದೆ
ಜೊಲ್ಲಿನಲ್ಲಿ ಆಸ್ಕೋರ್ಬಿಕ್ ಆಮ್ಲವನ್ನು ನಿಯಂತ್ರಿಸುವಂತಹ ವೀಳ್ಯದೆಲೆಯು ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ ಕಾರ್ಸಿನೊಜೇನ್ಸ್ ಅಂಶವನ್ನು ತಡೆಯುತ್ತದೆ.
ಸ್ತನದ ಹಾಲು ಹೆಚ್ಚಿಸಲು
ಕೆಲವು ತಾಯಂದಿರು ಸ್ತನದ ಹಾಲಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರು ವೀಳ್ಯದ ಎಲೆಯನ್ನು ಎಣ್ಣೆಯಲ್ಲಿ ಬೆರೆಸಿ ಸ್ತನಕ್ಕೆ ಹಚ್ಚುವುದರಿಂದ ಹಾಲಿನ ಉತ್ಪತ್ತಿ ಹೆಚ್ಚಲು ಸಹಾಯಕವಾಗುತ್ತದೆ.
ಮಧುಮೇಹದ ವಿರುದ್ಧ
ಇದರಲ್ಲಿ ಮಧುಮೇಹ ವಿರೋಧಿ ಗುಣ ಇರುವುದು ಕಂಡು ಬಂದಿದ್ದು ಇದು ಚಿಕಿತ್ಸೆಗೆ ನೆರವಾಗುತ್ತದೆ ಎನ್ನಲಾಗಿದೆ.
ನರಗಳ ದೌರ್ಬಲ್ಯ
ವೀಳ್ಯದ ಎಲೆಯ ರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನರದ ಸಮಸ್ಯೆ, ನರಗಳ ಬಳಲಿಕೆ, ನಿಶ್ಯಕ್ತಿ ಇವುಗಳಿಗೆ ಪರಿಹಾರ ದೊರಕುತ್ತದೆ.
ಗಾಯಕ್ಕೆ ಪರಿಹಾರ
ಗಾಯಕ್ಕೆ ವೀಳ್ಯದೆಲೆಯ ರಸವನ್ನು ಹಚ್ಚುವುದರಿಂದ ಗಾಯ ೨-೩ ದಿನಗಳಲ್ಲಿ ಕಡಿಮೆಯಾಗುತ್ತದೆ.
ನಿಮಿರು ದೌರ್ಬಲ್ಯ ತಡೆಗೆ
ಆಯುರ್ವೇದದಲ್ಲಿ ವೀಳ್ಯದೆಲೆಯನ್ನು ನಿಮಿರು ದೌರ್ಬಲ್ಯ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಕೇಸರಿ, ಏಲಕ್ಕಿ, ಒಣ ಕೊಬ್ಬರಿಯ ತುಂಡುಗಳು, ದ್ರಾಕ್ಷಿ ಮತ್ತು ಸಕ್ಕರೆ ಈ ಎಲೆಯೊಂದಿಗೆ ತಿಂದರೆ ಮತ್ತಷ್ಟು ಪರಿಣಾಮಕಾರಿಯಾಗಿರುವುದು. ನಿಮಿರು ದೌರ್ಬಲ್ಯಕ್ಕೆ ವೀಳ್ಯದೆಲೆ ನೈಸರ್ಗಿಕ ಮನೆಮದ್ದು.