ಕೊರೊನ ಸೋಂಕಿತರಿಗೆ ರೈಲ್ವೆ ಸ್ಟೇಷನಲ್ಲಿ ಚಿಕಿತ್ಸೆ
ಕೇಂದ್ರ ಸರ್ಕಾರವು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ರಾಜ್ಯದ ೧೪ ರೈಲ್ವೆ ಸ್ಟೇಷನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು, ಲಘು ರೋಗ ಲಕ್ಷಣ, ಶಂಕಿತರಿಗೆ ಭೋಗಿಗಳಲ್ಲಿ ಚಿಕಿತ್ಸೆ.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50000ದ ಗಡಿ ದಾಟಿದ ಬೆನ್ನಲ್ಲೇ, ಸೋಂಕಿತರ ಚಿಕಿತ್ಸೆಗೆಂದು ರೈಲ್ವೆ ಬೋಗಿಗಳನ್ನು ಸಿದ್ಧಪಡಿಸಲಾಗಿದ್ದು ದೇಶಾದ್ಯಂತ 215 ರೈಲ್ವೆ ನಿಲ್ದಾಣಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕರ್ನಾಟಕದ 14 ರೈಲ್ವೆ ಸ್ಟೇಷನ್ ಗಳು ಸೇರಿವೆ.
ಇಂಥ ಬೋಗಿಗಳ ಭದ್ರತೆಯನ್ನು ರೈಲ್ವೆ ರಕ್ಷಣಾ ಪಡೆ ವಹಿಸಿಕೊಳ್ಳಲಿದೆ. ಈಗಾಗಲೇ ದೇಶಾದ್ಯಂತ 20000 ಬೋಗಿಗಳನ್ನು ಮಾರ್ಪಡಿಸುವ ಕೆಲಸ ಕೇಂದ್ರ ಸರ್ಕಾರದ ಸೂಚನೆ ಅನ್ವಯ ನಡೆದಿದ್ದು, ಇವುಗಳಲ್ಲಿ 3.2 ಲಕ್ಷ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಸೌಲಭ್ಯ ಕಲ್ಪಿಸಲಾಗುವುದು. ರೋಗಿಗಳ ಜೊತೆಗೆ ವೈದ್ಯರಿಗೂ ಉಳಿದುಕೊಳ್ಳುವ ವ್ಯವಸ್ಥೆ ರೈಲಿನ ಬೋಗಿಗಳಲ್ಲಿ ಇರುತ್ತದೆ.