ಗ್ರಾಹಕರಿಗೆ ಶುಭ ಸುದ್ದಿ ನೀಡಿದ ಎಸ್ ಬಿ ಐ, ಹೆಚ್ ಡಿ ಎಫ್ ಸಿ, ಐ ಸಿ ಐ ಸಿ ಐ ಬ್ಯಾಂಕ್

ಗ್ರಾಹಕರಿಗೆ ಶುಭ ಸುದ್ದಿ ನೀಡಿದ ಎಸ್ ಬಿ ಐ, ಹೆಚ್ ಡಿ ಎಫ್ ಸಿ, ಐ ಸಿ ಐ ಸಿ ಐ ಬ್ಯಾಂಕ್

ಇಡೀ ದೇಶವೇ ಕೊರೊನ ವೈರಸ್ ನಿಂದಾಗಿ lockdown ಆಗಿದ್ದು ಗ್ರಾಹಕರಿಗೆ ಸಹಾಯವಾಗಲೆಂದು ಮಾರ್ಚ್ 27 ರಂದು RBI ಬ್ಯಾಂಕ್ ಗಳಿಗೆ ಹಾಗು ಹೌಸಿಂಗ್ ಫೈನಾನ್ಸ್ ಗಳು ಸೇರಿದಂತೆ ಎಲ್ಲಾ ಹಣಕಾಸು ಸಂಸ್ಥೆಗಳು ಸಾಲ ಪಾವತಿ ಅವಧಿಯಲ್ಲಿ ಮೂರು ತಿಂಗಳ ವಿನಾಯಿತಿ ನೀಡುವಂತೆ ನಿರ್ದೇಶಿಸಿತು.

ಮಂಗಳವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮೊರಟೋರಿಯಂ(ಇಎಂಐ ನಿಷೇಧ) ಘೋಷಿಸಿದ್ದವು ಇದೀಗ ಖಾಸಗಿ ಬ್ಯಾಂಕುಗಳಾದ ಹೆಚ್ ಡಿ ಎಫ್ ಸಿ, ಐ ಸಿ ಐ ಸಿ ಐ ಬ್ಯಾಂಕುಗಳು ಮೊರಟೋರಿಯಂ(ಇಎಂಐ ನಿಷೇಧ) ಘೋಷಿಸಿವೆ.

 
ಹೆಚ್ ಡಿ ಎಫ್ ಸಿ, ಐ ಸಿ ಐ ಸಿ ಐ ಬ್ಯಾಂಕುಗಳು ತಮ್ಮ ವೆಬ್ ಸೈಟ್ ನಲ್ಲಿ ಮೊರಟೋರಿಯಂ(ಇಎಂಐ ನಿಷೇಧ) option ಪ್ರಕಟಿಸಿವೆ. ಗ್ರಾಹಕರು ಸಾಲ ಖಾತೆ ಸಂಖ್ಯೆ ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿಯನ್ನು ತುಂಬಬೇಕು. 


ಆರ್‌ಬಿಐ ಪ್ರಕಾರ ನಿಷೇಧದ ಅಡಿಯಲ್ಲಿ ಮುಂದೂಡಲ್ಪಟ್ಟ ಕಂತುಗಳು ಮಾರ್ಚ್ 1, 2020 ರಿಂದ ಮೇ 31, 2020 ರವರೆಗೆ ಈ ಕೆಳಗಿನ ಪಾವತಿಗಳನ್ನು ಒಳಗೊಂಡಿರುತ್ತವೆ:

(i) ಪ್ರಧಾನ ಮತ್ತು / ಅಥವಾ ಬಡ್ಡಿ ಘಟಕಗಳು

(ii) ಬುಲೆಟ್ ಮರುಪಾವತಿ

(iii) ಸಮನಾದ ಮಾಸಿಕ ಕಂತುಗಳು (ಇಎಂಐಗಳು)

(iv) ಕ್ರೆಡಿಟ್ ಕಾರ್ಡ್ ಬಾಕಿ.