ಬ್ರೇಕಿಂಗ್ ನ್ಯೂಸ್ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಿ ಎಂ ಯಡಿಯೂರಪ್ಪ
ದಂಡದ ಬಿಸಿ ಎಲ್ಲ ವಾಹನ ಸವಾರರಿಗೂ ಸುಡುತ್ತಿದೆ ಅಷ್ಟರಲ್ಲೇ ನಮ್ಮ ಸಿಎಂ ಯಡಿಯೂರಪ್ಪ ದಂಡವನ್ನು ಇಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ .
ಕೇಂದ್ರ ಸರ್ಕಾರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಯಾದ ನಂತರ ಸಂಚಾರಿ ನಿಯಮದ ಉಲ್ಲಂಘನೆಯು ದುಬಾರಿಯಾಗಿತ್ತು. ಇದರಿಂದ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಗುಜರಾತಿನಲ್ಲಿ ದಂಡದ ಮಿತಿಯನ್ನು ಇಳಿಸಲಾಗಿದೆ ಅದೇ ರೀತಿ ಕರ್ನಾಟಕದಲ್ಲೂ ದಂಡದ ಮಿತಿಯನ್ನು ಇಳಿಸುವಂತೆ ಸಿಎಂ ಯಡಿಯೂರಪ್ಪನವರು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.