ಹಸಿರು ಮಾರ್ಗದ ಮೆಟ್ರೋ ಅಕ್ಟೋಬರ್ 1 ರಿಂದ ಓಡಲಿದೆ 6 ಭೋಗಿಯೊಂದಿಗೆ

ಹಸಿರು ಮಾರ್ಗದ ಮೆಟ್ರೋ ಅಕ್ಟೋಬರ್ 1 ರಿಂದ ಓಡಲಿದೆ 6 ಭೋಗಿಯೊಂದಿಗೆ
ನಮ್ಮ ಮೆಟ್ರೋ

ಬಿ ಎಂ ಆರ್ ಸಿ ಎಲ್ ಹಸಿರು ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ನಮ್ಮ ಮೆಟ್ರೋ ಹಸಿರು ಮಾರ್ಗ ನಾಗಸಂದ್ರ - ಯಲಚೇನಹಳ್ಳಿ ರೈಲು ಅಕ್ಟೋಬರ್ 1 ರಿಂದ 6 ಭೋಗಿಯೊಂದಿಗೆ ಸಂಚರಿಸಲಿದೆ.

ಇದುವರೆಗೂ 25 ರೈಲುಗಳನ್ನು 6 ಕೋಚ್ ರೈಲುಗಳಾಗಿ ಪರಿವರ್ತನೆ ಮಾಡಲಾಗಿದೆ ಆದರೆ ಅವು ನೇರಳೆ ಮಾರ್ಗದಲ್ಲಿ ಮಾತ್ರ ಲಭ್ಯ.

ಅಕ್ಟೋಬರ್ 1 ರಿಂದ ಪ್ರತಿ ತಿಂಗಳು 3-4 ರೈಲುಗಳನ್ನು 6 ಭೋಗಿಗಳಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದೆ.

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಈಗ 6 ಕೋಚ್ ಹೊಂದಿವೆ.

ಈ ಸುದ್ದಿಯು ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಸಲಹೆಗಳನ್ನು ಕಾಮೆಂಟ್‌ಗಳಲ್ಲಿ ಕಳುಹಿಸಿ. ಹೆಚ್ಚಿನ ಸುದ್ದಿಗಳಿಗಾಗಿ ..! Chotanews.in ಅನ್ನು ನೋಡುತ್ತಿರಿ.